ವಾಷಿಂಗ್ಟನ್ : ಸಾಮಾಜಿಕ ಮಾಧ್ಯಮದ ಪ್ಲಾಟ್ಫಾರ್ಮ್ ಫೇಸ್ಬುಕ್ನ ಮಾತೃ ಕಂಪನಿ ಮೆಟಾ ತನ್ನ ಕಂಪನಿಯ ಶೇ.13 ರಷ್ಟು ಅಂದರೆ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಳನ್ನು ವಜಾಗೊಳಿಸಿದೆ.
ಈ ಬಗ್ಗೆ ತಿಳಿಸಿರುವ ಮೆಟಾದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾರ್ಕ್ ಜುಕರ್ಬರ್ಗ್, ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ನಿರ್ಧಾರಕ್ಕೆ ಹೇಗೆ ಬಂದಿದ್ದೇವೆ ಎಂಬುದಕ್ಕೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ.
ಈ ನಿರ್ಧಾರ ಎಲ್ಲರಿಗೂ ಕಷ್ಟ ತಂದಿದೆ ಎಂಬುದು ನನಗೆ ತಿಳಿದಿದೆ. ವಜಾಗೊಳಗಾಗುತ್ತಿರುವವರ ಬಗ್ಗೆ ನಾನು ವಿಷಾದಿಸುತ್ತೇನೆ ಎಂದಿದ್ದಾರೆ.
2004 ರಲ್ಲಿ ಫೇಸ್ಬುಕ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕಂಪನಿಯಲ್ಲಿ ನಡೆದಿರುವ ವಜಾದ ಪ್ರಕ್ರಿಯೆಯಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ್ದಾಗಿದೆ. ಸುಮಾರು 87 ಸಾವಿರ ಉದ್ಯೋಗಿಗಳು ಇರುವ ಫೇಸ್ಬುಕ್ನಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದರೂ, ಹೊಸ ನೇಮಕಾತಿಯನ್ನು ನಡೆಸಲು ಸಿದ್ಧವಾಗಿದೆ ಎಂದು ಕಂಪನಿ ತಿಳಿಸಿದೆ.