Publish Date: Thu, 27 Oct 2022 (19:24 IST)
Updated Date: Thu, 27 Oct 2022 (19:26 IST)
ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಹಗಾಊ ವಸತಿ ಸಚಿವರಾದ ವಿ. ಸೋಮಣ್ಣ ಅವರಿಗೆ ಮನವಿ ಕೊಡಲು ಬಂದ ಮಹಿಳೆಗೆ ಕಪಾಳಮೊಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಖಂಡಿಸಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪ್ರಚಾರ ಸಮೀಸಿ ಕಾರ್ಯಕರ್ತರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ನೀಡುವುದಕ್ಕೆ ರೇಸ್ ಕೋರ್ಸ್‌ನ ಸಿಎಂ ನಿವಾಸಕ್ಕೆ ಆಗಮಿಸಿ ಮನವಿಯನ್ನ ಮಾಡಿಕೊಂಡ್ರು, ಪರಿಶಿಷ್ಟ ಜನಾಂಗಕ್ಕೆ ಸೇರಿದ ಕಡು ಬಡವ ಮಹಿಳೆ ಮೇಲೆ ತಾಳ್ಮಾಯನ್ನ ಕಳೆದುಕೊಂಡು ಮಹಿಳೆ ಅಂತಾ ನೋಡದೆ ಕಪಾಳಮೊಕ್ಷ ಮಾಡಿ ಹಲ್ಲೆ ಮಾಡಿದ್ದಾರೆ. ವಸತಿ ಸಚಿವರಾದವರು ಜನತೆಯ ಕಷ್ಟಗಳನ್ನ ಆಲಿಸುವುದನ್ನು ಬಿಟ್ಟು ಹಲ್ಲೆ ಮಾಡುವುದಕ್ಕೆ ಮುಂದಾಗಿರುವ ಕಾಂಗ್ರೆಸ್ ಖಂಡಿಸುತ್ತೆ. ಮುಖ್ಯಮಂತ್ರಿಗಳೆ ಕೂಡಲೇ ಸಚಿವರನ್ನ ರಾಜೀನಾಮೆ ತೆಗೆದುಕೊಳ್ಳಬೇಕು, ಹಾಗೂ ಬರುವ ೨೦೧೩ರ ಚುನಾವಣೆಯಲ್ಲಿ ಜನತೆಯು ಬಿಜೆಪಿಗೆ ತಕ್ಕ ಪಾಠವನ್ನ ಕಲಿಸುತ್ತದೆ. ಅಂತಾ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಗೆ ಮನವಿ ನೀಡುವುದರ ಮೂಲಕ ಎಚ್ಚರಿಕೆ ನೀಡಿದ್ರು.