Publish Date: Thu, 27 Oct 2022 (19:13 IST)
Updated Date: Thu, 27 Oct 2022 (19:18 IST)
ಉತ್ತರ ಪ್ರದೇಶದ ATM ಒಂದರಲ್ಲಿ ಹಣ ಡ್ರಾ ಮಾಡಿದ್ರೆ ನಕಲಿ ನೋಟುಗಳು ಬರ್ತಿವೆ. ಸ್ಥಳೀಯರು ಎಟಿಎಂಗೆ ಹಣ ಪಡೆಯಲು ಹೋದಾಗ ಯಂತ್ರದ ಮೂಲಕ ನಕಲಿ ನೋಟುಗಳು ಹೊರಬಂದಿವೆ. ಇದನ್ನು ಕಂಡ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನಕಲಿ ನೋಟ್ಗಳು ಬರ್ತಿದ್ದು ಜನ ಕಂಗಾಲಾಗಿದ್ದಾರೆ. ಈ ನೋಟುಗಳ ಮೇಲೆ ಫುಲ್ ಆಫ್ ಫನ್ ಎಂದು ಬರೆದಿದ್ದು, ನಕಲಿ ನೋಟುಗಳು ಎಂದು ತಕ್ಷಣಕ್ಕೆ ತಿಳಿದು ಬರ್ತಿದೆ. ATMನಿಂದ ಹಣ ಡ್ರಾ ಮಾಡಿದ ವ್ಯಕ್ತಿಯೊಬ್ಬರು ನೋಟಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆದರೆ ಇದು ಉತ್ತರ ಪ್ರದೇಶದ ATM ಒಂದರಲ್ಲಿ ಕಂಡು ಬಂದ ಹಣವಾಗಿದ್ದು, ಯಾವ ATMನಲ್ಲಿ ಈ ರೀತಿಯಾಗ್ತಿದೆ ಎಂದು ತಿಳಿದು ಬಂದಿಲ್ಲ. ಈ ವಿಡಿಯೋಗೆ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.