Select Your Language

Notifications

webdunia
webdunia
webdunia
webdunia

ಮನೆಗೆಲಸದವರಿಗೆ ಅರ್ಜಿ ಆಹ್ವಾನಿಸಿದ ಬ್ರಿಟನ್ ರಾಜ ಮನೆತನ! ವೇತನ ಕೇಳಿದರೆ ದಂಗಾಗುತ್ತೀರಿ!

ಮನೆಗೆಲಸದವರಿಗೆ ಅರ್ಜಿ ಆಹ್ವಾನಿಸಿದ ಬ್ರಿಟನ್ ರಾಜ ಮನೆತನ! ವೇತನ ಕೇಳಿದರೆ ದಂಗಾಗುತ್ತೀರಿ!
ಲಂಡನ್ , ಬುಧವಾರ, 28 ಅಕ್ಟೋಬರ್ 2020 (10:19 IST)
ಲಂಡನ್: ಬ್ರಿಟನ್ ರಾಜಮನೆತನ ಎಂದರೆ ಸುಮ್ನೇನಾ? ಈ ಸುದ್ದಿ ಓದಿದರೆ ಅದು ನಿಜ ಎನಿಸಬಹುದು. ಬ್ರಿಟನ್ ರಾಜಮನೆತನದವರು ಹೌಸ್ ಕೀಪಿಂಗ್ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಈ ಉದ್ಯೋಗಕ್ಕೆ ನೀಡಿದ ವೇತನದ ಆಫರ್ ನೋಡಿದರೆ ಬೆರಗಾಗುವುದು ಸಹಜ!

 

ತಮ್ಮ ವಿಂಡ್ಸರ್ ಕಾಸ್ಟಲ್ ಅರಮನೆಯ ಹೌಸ್ ಕೀಪಿಂಗ್ ಗೆ ಕೆಲಸದವರು ಬೇಕಾಗಿದ್ದಾರೆ ಎಂದು ರಾಜಮನೆತನದ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಈ ಉದ್ಯೋಗಕ್ಕೆ ಬರೋಬ್ಬರಿ 18.5 ಲಕ್ಷ ರೂ. ವೇತನ ನೀಡುವುದಾಗಿ ಆಫರ್ ನೀಡಲಾಗಿದೆ. ಇದರ ಜತೆಗೆ ಅರಮನೆಯಲ್ಲೇ ಊಟ, ವಸತಿ ಸೌಕರ್ಯವೂ ಒದಗಿಸಲಾಗುತ್ತದಂತೆ. ವಾರದ ರಜೆ ಅಲ್ಲದೆ, ವರ್ಷಕ್ಕೆ 33 ದಿನ ರಜೆ ನೀಡಲಾಗುವುದು. ಪ್ರಯಾಣದ ಭತ್ಯೆ ನೀಡಲಾಗುವುದು. ರಾಜಮನೆತನಕ್ಕೆ ಸೇರಿದ ಎಲ್ಲಾ ಅರಮನೆ, ಬಂಗ್ಲೆಗಳ ನಿರ್ವಹಣೆ ನೋಡಿಕೊಳ್ಳಬೇಕಾಗುತ್ತದೆ ಎಂದು ವಿವರ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯನ್ನು ಮಾರಾಟ ಮಾಡಿ ವೇಶ್ಯಾವಾಟಿಕೆಗೆ ತಳ್ಳಿದ ನೀಚರು