Select Your Language

Notifications

webdunia
webdunia
webdunia
webdunia

ಹುಡುಗಿಯನ್ನು ಮಾರಾಟ ಮಾಡಿ ವೇಶ್ಯಾವಾಟಿಕೆಗೆ ತಳ್ಳಿದ ನೀಚರು

ಹುಡುಗಿಯನ್ನು ಮಾರಾಟ ಮಾಡಿ ವೇಶ್ಯಾವಾಟಿಕೆಗೆ ತಳ್ಳಿದ ನೀಚರು
ವಿಜಯವಾಡ , ಬುಧವಾರ, 28 ಅಕ್ಟೋಬರ್ 2020 (10:09 IST)
ವಿಜಯವಾಡ : 16 ವರ್ಷದ ಹುಡುಗಿಯನ್ನು ಮಾರಾಟ ಮಾಡಿ ಆಕೆಯನ್ನು ಬಲವಂತವಾಗಿ  ವೇಶ್ಯಾವಾಟಿಕೆಗೆ ತಳ್ಳಿ ಮಾನಭಂಗ ಎಸಗಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಸಂತ್ರಸ್ತೆ ಬಡತನದಿಂದ ಬಳಲುತ್ತಿದ್ದ ಕಾರಣ ಅವಳ ಅತ್ತಿಗೆ ಆಕೆಯನ್ನು 2,700ರೂ. ಗೆ ಮಹಿಳೆಯೊಬ್ಬಳಿಗೆ ಮಾರಾಟ ಮಾಡಿದ್ದಾಳೆ.  ಮಹಿಳೆ ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ. ಅಲ್ಲಿ ಆಕೆಯ ಮೇಲೆ ಹಲವಾರು ಮಂದಿ ಪುರುಷರು ಮಾನಭಂಗ ಎಸಗಿದ್ದಾರೆ.

ಈ ಮಾಹಿತಿ ತಿಳಿದ ಪೊಲೀಸರು ಸಂತ್ರಸ್ತೆಯನ್ನು ಬಂಧಿಸಲಾದ ಮನೆಯ ಮೇಲೆ ದಾಳಿ ನಡೆಸಿ ಹುಡುಗಿಯನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಮೇಲೆ ಮಾನಭಂಗ ಎಸಗಿದ ಆರೋಪಿಗಳ ಜೊತೆಗೆ ಮಹಿಳೆ ಮತ್ತು ಆಕೆಯ ಅತ್ತಿಗೆಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದ ಹುಡುಗಿಯನ್ನು ಗರ್ಭಿಣಿ ಮಾಡಿದ ವಡಾ ಪಾವ್ ಮಾರಾಟಗಾರ