Select Your Language

Notifications

webdunia
webdunia
webdunia
webdunia

ಹಿಂದೂಗಳನ್ನು ಕೊಂದು ಕೋಲ್ಕತ್ತಾ ವಶಪಡಿಸಿಕೊಳ್ತೇನೆ ಎಂದ ಬಾಂಗ್ಲಾದೇಶ ಇಸ್ಲಾಮಿಸ್ಟ್ ವಿಡಿಯೋ

Bangladesh islamist

Krishnaveni K

ಢಾಕಾ , ಮಂಗಳವಾರ, 13 ಮೇ 2025 (12:37 IST)
Photo Credit: X
ಢಾಕಾ: ಹಿಂದೂಗಳನ್ನು ಕೊಂದು ಕೋಲ್ಕತ್ತಾವನ್ನು ವಶಪಡಿಸಿಕೊಳ್ಳುತ್ತೇನೆ ಎಂದು ಬಾಂಗ್ಲಾದೇಶದ ಇಸ್ಲಾಮಿಸ್ಟ್ ಒಬ್ಬಾತ ಭಾಷಣ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಬಾಂಗ್ಲಾದ ಖುರಾನ್ ಶಿಕ್ಷಕನೊಬ್ಬ ಮಾಡಿರುವ ಪ್ರಚೋದನಕಾರೀ ಭಾಷಣದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದೂಗಳ ದೈಹಿಕವಾಗಿ ದುರ್ಬಲರು, ಆತ್ಮಹತ್ಯಾ ಬಾಂಬರ್ ಗಳನ್ನು ಕಳುಹಿಸಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳುತ್ತೇನೆ ಎಂದು ಈತ ಹೇಳಿಕೊಂಡಿದ್ದಾನೆ.

ಇದಕ್ಕಾಗಿ ನಾನು ಒಂದು ಯೋಜನೆ ರೂಪಿಸಿದ್ದೇನೆ. 70 ಫೈಟರ್ ಜೆಟ್ ಬಿಡಿ, ಕೋಲ್ಕತ್ತಾ ವಶಪಡಿಸಿಕೊಳ್ಳಲು ನನಗೆ 7 ಫೈಟರ್ ಜೆಟ್ ಕೂಡಾ ಬೇಡ. 70 ವಿಮಾನ ಯಾಕೆ ಬೇಕು, ಅಲ್ಲಿ ಯಾರು ವಾಸಿಸುತ್ತಾರೆ ಎಂಬುದೆಲ್ಲಾ ನನಗೆ ಗೊತ್ತಿದೆ ಎಂದಿದ್ದಾನೆ.

ಪ್ರತಿಮೆಗಳನ್ನು ಪೂಜಿಸುವ ಅವರು ದೈಹಿಕವಾಗಿ ದುರ್ಬಲರು. ಕಾಫೀರರನ್ನು ಕೊಲ್ಲಲು ನಿಮ್ಮ ಪ್ರಾಣವನ್ನೇ ಕಳೆದುಕೊಂಡರೂ ತಪ್ಪಿಲ್ಲ ಎಂದು ಕುರಾನ್ ಹೇಳಿದೆ. ವಿಗ್ರಹಾರಾಧಕರಿಗೆ ರಕ್ತ ನೋಡಿದರೆ ಭಯವಾಗುತ್ತದೆ ಎಂದೆಲ್ಲಾ ಈತ ಬಡಬಡಿಸಿಕೊಂಡಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ ಬೆಳೆಗಾರರಿಗೆ ನಿರಾಸೆ, ಇಂದಿನ ಬೆಲೆ ಎಷ್ಟಾಗಿದೆ ನೋಡಿ