Publish Date: Tue, 13 May 2025 (11:39 IST)
Updated Date: Tue, 13 May 2025 (11:41 IST)
ಬೆಂಗಳೂರು: ಬೆಲೆ ಏರಿಕೆಯ ನಿರೀಕ್ಷೆಯಲ್ಲಿರುವ ಅಡಿಕೆ ಬೆಳೆಗಾರರಿಗೆ ನಿರಾಸೆಯಾಗಿದೆ. ಇಂದು ಅಡಿಕೆ ಬೆಲೆ ಕೊಂಚ ಇಳಿಕೆಯಾಗಿದ್ದು ಬೆಳೆಗಾರರಿಗೆ ಹೊಡೆತ ನೀಡಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಹೊಸ ಅಡಿಕೆ, ಹಳೆ ಅಡಿಕೆ ಬೆಲೆ ಯಥಾ ಸ್ಥಿತಿಯಲ್ಲಿತ್ತು. ಏರಿಕೆಯಾಗದಿದ್ದರೂ ಇಳಿಕೆಯಾಗಿಲ್ಲ ಎಂಬ ನೆಮ್ಮದಿಯಿತ್ತು. ಆದರೆ ಇಂದು ಹಳೆ ಅಡಿಕೆ ಮತ್ತು ಡಬಲ್ ಚೋಲ್ ಅಡಿಕೆ ಬೆಲೆ ಇಳಿಕೆಯಾಗಿದೆ. ಹೊಸ ಅಡಿಕೆ ಬೆಲೆ 460 ರೂ.ಗಳಷ್ಟೇ ಇದ್ದರೆ ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ. ಗಳಿಂದ 490 ರೂ.ಗೆ ಇಳಿಕೆಯಾಗಿದೆ. ಇಂದು ಡಬಲ್ ಚೋಲ್ ಬೆಲೆ ಭಾರೀ ಇಳಿಕೆಯಾಗಿದ್ದು ಗರಿಷ್ಠ 510 ರೂ.ಗಳಿದ್ದಿದ್ದು 490 ರೂ.ಗೆ ತಲುಪಿದೆ.
ಉಳಿದಂತೆ ಪಟೋರ ಮತ್ತು ಇತರೆ ಅಡಿಕೆ ಬೆಲೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಹೊಸ ಫಟೋರ ದರ ಇಂದು 360 ರೂ.ಗಳಷ್ಟಿದೆ. ಹಳೆ ಫಟೋರ ದರ 370 ರೂ. ಗಳಷ್ಟಾಗಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಹೊಸ ಉಳ್ಳಿಗೆ ಗರಿಷ್ಠ 250 ರೂ., ಹಳೆ ಉಳ್ಳಿ ದರವೂ 250 ರೂ.ಗೆ ಗಳಷ್ಟಿದೆ. ಹೊಸ ಕೋಕ ದರವೂ ಯಥಾಸ್ಥಿತಿಯ್ಲಿದ್ದು 300 ರೂ.ಆಗಿದೆ. ಹಳೇ ಕೋಕ 300 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಇಂದು ಕಾಳುಮೆಣಸು ದರ ಯಥಾಸ್ಥಿತಿಯಲ್ಲಿದ್ದು 650 ರೂ.ಗಳಷ್ಟೇ ಇದೆ. ಇನ್ನು ಒಣಕೊಬ್ಬರಿ ಬಹಳ ದಿನಗಳ ನಂತರ ಏರಿಕೆಯಾಗಿದ್ದು ಗರಿಷ್ಠ 180 ರೂ.ಗಳಷ್ಟಾಗಿದೆ.