Select Your Language

Notifications

webdunia
webdunia
webdunia
webdunia

IPL 2025: ತವರಿನ ಪ್ರೇಕ್ಷಕರ ಮುಂದೆ ಪರದಾಡಿದ ಪಂಜಾಬ್‌ ಬ್ಯಾಟರ್‌ಗಳು: ಕೆಕೆಆರ್‌ ಬೌಲರ್‌ಗಳ ಕರಾಮತ್ತು

Indian Premier League, Kolkata Knight Riders, Punjab Kings

Sampriya

ಮೊಹಾಲಿ , ಮಂಗಳವಾರ, 15 ಏಪ್ರಿಲ್ 2025 (21:00 IST)
Photo Courtesy X
ಮೊಹಾಲಿ: ಐಪಿಎಲ್‌ನ ಇಂದಿನ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಮುಂದೆ ಪಂಜಾಬ್‌ ಕಿಂಗ್ಸ್‌ ತಂಡದ ಬ್ಯಾಟರ್‌ಗಳು ಅಕ್ಷರಶಃ ಪರದಾಡಿದರು.

ಪಂಜಾಬ್‌ನ ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 15.3 ಓವರ್‌ಗಳಲ್ಲಿ 111 ರನ್‌ಗಳಿಸಿ ಆಲೌಟ್‌ ಆಯಿತು. ಕೋಲ್ಕತ್ತದ ಗೆಲುವಿಗೆ 112 ರನ್‌ಗಳ ಗುರಿಯನ್ನು ನೀಡಿದೆ.

ಆರಂಭಿಕ ಆಟಗಾರ ಪ್ರಭಸಿಮ್ರಾನ್‌ 30 ರನ್‌ ಗಳಿಸಿ, ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ನಾಯಕ ಶ್ರೇಯಸ್‌ ಅಯ್ಯರ್‌, ಜೋಸ್‌ ಇಂಗ್ಲೀಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು.

ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಹರ್ಷಿತ್ ರಾಣಾ ಮೂರು ವಿಕೆಟ್‌ ಪಡೆದು ಎದುರಾಳಿ ತಂಡಕ್ಕೆ ದೊಡ್ಡ ಪೆಟ್ಟು ನೀಡಿದರು. ವರುಣ್‌ ಚಕ್ರವರ್ತಿ ಮತ್ತು ಸುನಿಲ್‌ ನಾರಾಯಣ್‌ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.

ಕೆಕೆಆರ್‌ ತಂಡ ಈವರೆಗೆ ಆಡಿರುವ 6 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಪಂಜಾಬ್ ಕಿಂಗ್ಸ್ ಐದು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಉಭಯ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

Glenn Maxwell: ಮ್ಯಾಕ್ಸ್ ವೆಲ್ ರನ್ನು ಹರಾಜಿನಲ್ಲಿ ಕೈ ಬಿಟ್ಟಿದ್ದಕ್ಕೇ ಬಚಾವ್ ಎಂದ ಆರ್ ಸಿಬಿ ಫ್ಯಾನ್ಸ್