Publish Date: Fri, 22 Jun 2018 (09:09 IST)
Updated Date: Fri, 22 Jun 2018 (09:11 IST)
ಲಂಡನ್: ವಿದೇಶದಲ್ಲಿ ಮದುವೆಗೆ ಮೊದಲು ಸೆಕ್ಸ್ ಎನ್ನುವುದು ಕಾಮನ್. ಆದರೆ ಈ ಚೆಲುವೆ ಮಾತ್ರ ಮದುವೆಯಾಗುವವರೆಗೂ ‘ಪರಿಶುದ್ಧ’ಳಾಗಿರಲು ತೀರ್ಮಾನಿಸಿದ್ದಾಳಂತೆ.
21 ವರ್ಷದ ಮಾಡೆಲ್ ಕಮ್ ಯೂ ಟ್ಯೂಬ್ ಸ್ಟಾರ್ ಕರ್ಟ್ನಿ ರೈನೆ ಇಂತಹದ್ದೊಂದು ತೀರ್ಮಾನ ಮಾಡಿದ್ದಾಳೆ. ಮದುವೆಗೆ ಮೊದಲು ಯಾವುದೇ ಕಾರಣಕ್ಕೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ ಎಂದು ಆಕೆ ಶಪಥ ಮಾಡಿದ್ದಾಳಂತೆ.
ಅದಕ್ಕೆ ಕಾರಣವೂ ಇದೆ. ಹೀಗೆ ಮಾಡುವ ಮೂಲಕ ಇತರ ಮಹಿಳೆಯರಿಗೆ ಮದುವೆಯವರೆಗೂ ಕನ್ಯತ್ವ ಉಳಿಸಿಕೊಂಡು ‘ಪರಿಶುದ್ಧ’ಳಾಗಿ ಇರಲು ಸ್ಪೂರ್ತಿ ನೀಡುವುದು ಆಕೆಯ ಉದ್ದೇಶವಂತೆ. ಮದುವೆಗೆ ಮೊದಲು ಕನ್ಯತ್ವ ಕಳೆದುಕೊಳ್ಳದಿದ್ದರೆ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುರಕ್ಷಿತವಾಗಿರುತ್ತೇವೆ ಎನ್ನುವುದು ಆಕೆಯ ನಂಬಿಕೆಯಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.