Select Your Language

Notifications

webdunia
webdunia
webdunia
webdunia

ಸಿಂಪಲ್ ವಿಧಾನ ಪಾಲಿಸಿ ಗುಂಗುರು ಕೂದಲು ನಿಮ್ಮದಾಗಿಸಿ...

ಸಿಂಪಲ್ ವಿಧಾನ ಪಾಲಿಸಿ ಗುಂಗುರು ಕೂದಲು ನಿಮ್ಮದಾಗಿಸಿ...
, ಮಂಗಳವಾರ, 19 ಜೂನ್ 2018 (15:58 IST)
ಇತ್ತೀಚಿನ ದಿನಗಳಲ್ಲಿ ಸೊಂಪಾದ ಕಾಂತಿಯುತ ಗುಂಗುರು ಕೂದಲನ್ನು ಹೊಂದಬೇಕು ಎಂದು ಕೆಲವರು ಬಯಸುತ್ತಾರೆ. ಏಕೆಂದರೆ ಆಧುನಿಕ ಕಾಲದಲ್ಲಿ ಹಲವು ರೀತಿಯ ಕೇಶರಾಶಿಗಳ ನಡುವೆ ಈ ಗುಂಗುರು ಕೂದಲಿನ ಕೇಶರಾಶಿ ತನ್ನದೇ ವೈಶಿಷ್ಟ ಆಕರ್ಷಣೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಇಂದಿನ ದಿನಗಳಲ್ಲಿ ಕೆಲವರು ತಮ್ಮ ಕೂದಲನ್ನು ಗುಂಗುರಾಗಿ ಪರಿವರ್ತಿಸಿಕೊಳ್ಳುವುದು ಮತ್ತು ಅದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುವುದನ್ನು ನಾವು ಕಾಣಬಹುದು. ಆಧುನಿಕ ಉಪಕರಣಗಳನ್ನು ಬಳಸಿ ಕೆಲವರು ತಮ್ಮ ಕೂದಲನ್ನು ಗುಂಗರಾಗಿಸಿಕೊಳ್ಳುತ್ತಾರೆ ಅದರಿಂದ ಮುಂದೆ ತೊಂದರೆ ಸಹ ಆಗಬಹುದು ಇಂದಿನ ಲೇಖನದಲ್ಲಿ ನಾವು ಮನೆಯಲ್ಲಿ ಸಿಗುವ ವಸ್ತುಗಳಿಂದ ಕೂದಲನ್ನು ನೈಸರ್ಗಿಕವಾಗಿ ಹೇಗೆ ಗುಂಗುರಾಗಿಸಬಹುದು ಎಂಬುದರ ಸಂಪೂರ್ಣ ವಿವರಣೆ ಕೊಡ್ತೀವಿ ಓದಿ.
 
ಕೂದಲನ್ನು ನಿಧಾನವಾಗಿ ವಾಲ್ಯೂಮೈಸಿಂಗ್ ಶಾಂಪೂ ಬಳಸಿ ಚೆನ್ನಾಗಿ ಉಜ್ಜಿ ನಂತರ ಸಹಜವಾಗಿ ತಲೆಯನ್ನು ತೊಳೆಯಿರಿ ಮತ್ತು ಕೂದಲಿನ ಗಂಟುಗಳನ್ನು ಬಿಡಿಸಿ ಅದಕ್ಕೆ ಕಂಡಿಷನರ್ ಶಾಂಪುವನ್ನು ಹಚ್ಚಿ ಚೆನ್ನಾಗಿ ತೊಳೆದು ಕೂದಲಿನ ನೀರನ್ನು ಒರೆಸಿಕೊಳ್ಳಿ. ಈ ಮೂಲಕ ನಿಮ್ಮ ಕೂದಲನ್ನು ಸ್ವಾಭಾವಿಕವಾಗಿ ಗುಂಗುರು ಮಾಡಬಹುದು.
 
ಇತ್ತೀಚಿನ ದಿನಗಳಲ್ಲಿ ವೆಲ್‌ಕ್ರೊ ರೋಲರ್ ಬಳಸಿ ಕೂಡಾ ಕೂದಲನ್ನು ಗುಂಗುರಾಗಿಸಬಹುದು ಅದಕ್ಕೆ ಹೆಚ್ಚೇನು ಹಣ ಬೇಕಿಲ್ಲ, ನಿಮ್ಮ ಒದ್ದೆಯಾಗಿರುವ ತಲೆಗೂದಲನ್ನು ಕೆಲ ಭಾಗಗಳಾಗಿ ವಿಂಗಡಿಸಿ ಅದನ್ನು ವೆಲ್‌ಕ್ರೊ ರೋಲರ್ ಬಳಸಿಕೊಂಡು ಮೇಲ್ಮುಖವಾಗಿ ಕ್ಲಿಪ್ ಮಾಡುತ್ತಾ ಹೋಗಿ ಅಲ್ಲದೇ ಪ್ರತಿ ಭಾಗವನ್ನು ಚೆನ್ನಾಗಿ ಸುತ್ತಿ ತಲೆಗೆ ಹೊಂದಿಕೊಳ್ಳುವ ರೀತಿಯಲ್ಲಿ ರೋಲ್ ಮಾಡಿರಿ ನಂತರ ನಿಮ್ಮ ಕೂದಲು ಚೆನ್ನಾಗಿ ಒಣಗಿದ ಮೇಲೆ ವೆಲ್‌ಕ್ರೊ ರೋಲರ್ ತೆಗೆದುಹಾಕಿ ಈ ಮೂಲಕ ಶೀಘ್ರವಾಗಿ ಗುಂಗುರು ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.
 
ಪೇಪರ್ ಟವೆಲ್‌ಗಳನ್ನು ತೆಗೆದುಕೊಂಡು ಅವುಗಳನ್ನು ನಿಮಗೆ ಬೇಕಾದ ಅಳತೆಯಲ್ಲಿ ಅವುಗಳನ್ನು ತುಣುಕುಗಳನ್ನಾಗಿಸಿ ಮಡಚಿಕೊಳ್ಳಿ. ನಂತರ ನಿಮ್ಮ ಕೂದಲನ್ನು ತೇವಗೊಳಿಸಿ ಯಾವ ತುದಿಯಲ್ಲಿ ಕೂದಲನ್ನು ಗುಂಗುರಾಗಿಸಬೇಕೋ ಅಲ್ಲಿ ಪೇಪರ್ ಟವೆಲ್‌ ತುಣುಕುಗಳನ್ನು ಸುತ್ತಿರಿ ನಂತರ ನೆತ್ತಿಗೆಯವರೆಗೆ ಕೂದಲುಗಳನ್ನು ರೋಲ್ ಮಾಡುತ್ತಾ ಸಾಗಿ. ನೆತ್ತಿಗೆ ತಾಗುವಂತೆ ಹೇರ್‌ಪಿನ್ ಹಾಕಿ. ಹೀಗೆ ಮಾಡಿ ಒಂದು ನಲವತ್ತು ನಿಮಿಷಗಳ ಕಾಲ ಕೂದಲನ್ನು ಬಿಡಿ. ನಂತರ ಅವುಗಳನ್ನು ನಿಧಾನಕ್ಕೆ ತೆರೆಯಿರಿ.
 
ನಿತ್ಯ ತಲೆ ಸ್ನಾನ ಮಾಡಿದ ನಂತರ ಮೃದುವಾದ ಟವೆಲ್‌ನಿಂದ ಕೂದಲುಗಳನ್ನು ಚೆನ್ನಾಗಿ ಒರೆಸಿಕೊಳ್ಳಿ ತದನಂತರ ಕೂದಲನ್ನು ಮಧ್ಯದಲ್ಲಿ ಬೈತಲೆ ಬರುವಂತೆ ಬಾಚಿಕೊಳ್ಳಿ ಹಾಗೂ ಎರಡೂ ಭಾಗಗಳನ್ನು ಪ್ರತ್ಯೇಕವಾಗಿ ಸುರುಳಿಯಾಗಿ ಟ್ವಿಸ್ಟ್ ಮಾಡಿ. ನಂತರ ಇವುಗಳನ್ನು ಗಟ್ಟಿಯಾಗಿ ಪಿನ್ ಮಾಡಿಕೊಳ್ಳಿ. ಒಂದು ರಾತ್ರಿಯ ನಂತರ ಕ್ಲಿಪ್‌ಗಳನ್ನು ತೆಗೆದು ನೋಡಿದರೆ ನಿಮ್ಮ ಕೂದಲು ಸುಂದರವಾಗಿ ಸುರುಳಿಯಾಗಿರುತ್ತದೆ.
 
ತೆವವಾಗಿರುವ ಕೂದಲಿಗೆ ಮೊದಲು ಹೆಡ್‌ಬ್ಯಾಂಡ್ ಧರಿಸಿಕೊಳ್ಳಿ. ಬಾಚಣಿಕೆಯ ಮೂಲಕ ಕೂದಲುಗಳನ್ನು ಮೇಲೆತ್ತಿ ನಿಧಾನವಾಗಿ ಹೆಡ್‌ಬ್ಯಾಂಡ್‌ನಲ್ಲಿ ಸುರುಳಿಯಾಗಿ ತೂರಿಸಿ. ಇದೇ ರೀತಿ ಎಲ್ಲಾ ಕೂದಲುಗಳನ್ನು ಹೆಡ್‌ಬ್ಯಾಂಡ್‌ನೊಳಗೆ ಹಾಕಿ. ನಂತರ ಗಟ್ಟಿಯಾಗಿ ಕೂರದ ಕೆಲ ಕೂದಲುಗಳು ಹೊರಗೆ ಉಳಿದಿದ್ದರೆ ಅವುಗಳಿಗೆ ಹೇರ್‌ಕ್ಲಿಪ್ ಅಳವಡಿಸಿ ಬ್ಯಾಂಡ್‌ನೊಳಕ್ಕೆ ತೂರಿಸಿ. ಇದನ್ನು ಕೆಲ ಗಂಟೆಗಳವರೆಗೆ ಹಾಗೆಯೇ ಬಿಡಿ. ಒಮ್ಮೆ ಕೂದಲುಗಳು ಸಂಪೂರ್ಣವಾಗಿ ಒಣಗಿದ ನಂತರ ಹೇರ್‌ಪಿನ್‌ಗಳನ್ನು ತೆಗೆದು ಕೂದಲನ್ನು ಬಿಡಿಸಿಕೊಳ್ಳಿ.
 
ಈ ರೀತಿ ಮಾಡುವ ಮೂಲಕ ಮನೆಯಲ್ಲಿಯೇ ಹೆಚ್ಚಿನ ಹಣವನ್ನು ವ್ಯಯಿಸದೇ ಸುಲಭವಾಗಿ ನಿಮ್ಮ ಕೂದಲನ್ನು ಗುಂಗುರಾಗಿ ಮಾಡಬಹುದು. ಅಲ್ಲದೇ ಕೃತಕವಾಗಿ ಗುಂಗುರು ಮಾಡಲು ಹೋಗಿ ಉಂಟಾಗುವ ಅಡ್ಡ ಪರಿಣಾಮಗಳಿಂದ ಸುಲಭವಾಗಿ ಪಾರಗಬಹುದು.      

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಈ ಸಲಹೆಗಳನ್ನು ಪಾಲಿಸಿ..