Publish Date: Sun, 17 Jun 2018 (07:43 IST)
Updated Date: Sun, 17 Jun 2018 (07:44 IST)
ಬೆಂಗಳೂರು: ಫೇಸ್ ಪ್ಯಾಕ್ ಮಾಡಿಕೊಳ್ಳಲು ಸುಲಭ ಉಪಾಯವೊಂದು ಇಲ್ಲಿದೆ ನೋಡಿ. ಅದಕ್ಕೆ ಬೇಕಾಗಿರುವುದು ಪುದೀನಾ ಎಲೆ ಮತ್ತು ಸೌತೆಕಾಯಿ ಮಾತ್ರ.
ಪುದೀನಾ ಮತ್ತು ಸೌತೆಕಾಯಿ ಎರಡೂ ಕೂಡಾ ಚರ್ಮದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇವೆರಡೂ ಚರ್ಮ ಸುಕ್ಕುಗಟ್ಟದಂತೆ ಮತ್ತು ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಅದರ ಫೇಸ್ ಪ್ಯಾಕ್ ಮಾಡುವುದು ಹೀಗೆ ನೋಡಿಕೊಳ್ಳಿ.
ಕೆಲವು ಪುದೀನಾ ಎಲೆ ಮತ್ತು ಸೌತೆ ಕಾಯಿ ಬಿಲ್ಲೆಗಳ ಜತೆಗೆ ಸ್ವಲ್ಪ ಜೇನು ತುಪ್ಪ ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಇದು ಪೇಸ್ಟ್ ನ ಹದಕ್ಕೆ ಇರಲಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಬಿಡಿ. ಬಳಿಕ ತಣ್ಣನೆಯ ನೀರಿನಿಂದ ಮುಖ ತೊಳೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುತ್ತಿದ್ದರೆ ಚರ್ಮದ ಕಾಂತಿ ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.