Publish Date: Fri, 15 Jun 2018 (08:45 IST)
Updated Date: Fri, 15 Jun 2018 (08:46 IST)
ಬೆಂಗಳೂರು: ಕೆಲವು ತರಕಾರಿಗಳೇ ಹಾಗೆ, ಹಸಿಯಾಗಿ ಸಲಾಡ್ ಮಾಡಿ ತಿನ್ನುವ ಹಾಗೆಯೇ ಇಲ್ಲ. ಅದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವೇ ಹೆಚ್ಚು. ಅಂತಹ ತರಕಾರಿಗಳು ಯಾವುವು ನೋಡೋಣ.
ಆಲೂಗಡ್ಡೆ
ಕೆಲವರು ಆಲೂಗಡ್ಡೆ ಕತ್ತರಿಸಿ ಹಸಿಯಾಗಿ ಉಪ್ಪು ಖಾರ ಹಾಕಿಕೊಂಡು ಸೇವಿಸುತ್ತಾರೆ. ಆದರೆ ಆಲೂಗಡ್ಡೆ ಹಸಿಯಾಗಿ ಸೇವಿಸುವುದರಿಂದ ಜೀರ್ಣವಾಗುವುದು ಕಷ್ಟ ಮತ್ತು ಗ್ಯಾಸ್ಟಿಕ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.
ಬಸಳೆ
ಬಸಳೆ ಸೊಪ್ಪಿನಂತಹ ತರಕಾರಿಗಳು ಕ್ಯಾನ್ಸರ್ ನಂತಹ ಮಾರಕ ರೋಗಗಳ ವಿರುದ್ಧ ಹೋರಾಡುತ್ತವೆ. ಆದರೆ ಇವುಗಳನ್ನು ಹಸಿ ಸೇವಿಸುವುದರಿಂದ ಪ್ರಯೋಜನವಿಲ್ಲ. ಬೇಯಿಸಿ ತಿಂದರೆ ಅದರಲ್ಲಿ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುತ್ತದೆ.
ಮಶ್ರೂಮ್
ಮಶ್ರೂಮ್ ಕೂಡಾ ಹಸಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಹಸಿ ಮಶ್ರೂಮ್ ನಲ್ಲಿ ಕೆಲವೊಮ್ಮೆ ವಿಷಕಾರಿ ಅಂಶಗಳಿರುವ ಸಾಧ್ಯತೆಯಿದ್ದು, ಇದು ದೇಹದ ಮೇಲೆ ಪರಿಣಾಮ ಬೀರಬಹುದು.
ಬದನೆ
ಎಳೆ ಬದನೆ ಕಾಯಿಗಳಲ್ಲೂ ಆಲೂಗಡ್ಡೆಯಲ್ಲಿರುವಂತಹ ಅಂಶಗಳಿರುತ್ತವೆ. ಹೀಗಾಗಿ ಇದನ್ನು ಹಸಿಯಾಗಿ ತಿನ್ನುವುದರಿಂದ ಗ್ಯಾಸ್ಟಿಕ್ ನಂತಹ ಸಮಸ್ಯೆ ಬರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.