Publish Date: Wed, 20 Jun 2018 (09:22 IST)
Updated Date: Wed, 20 Jun 2018 (09:24 IST)
ಬೆಂಗಳೂರು: ಮಹಿಳೆಯರಂತೆ ಪುರುಷರೂ ಕೆಲವೊಮ್ಮೆ ಸೆಕ್ಸ್ ನಿಂದ ವಿಮುಖನಾಗುವುದು ಇದೆ. ಅದಕ್ಕೆ ಕಾರಣಗಳು ಹಲವಾರು.
ಹಾರ್ಮೋನ್
ಹಾರ್ಮೋನ್ ವ್ಯತ್ಯಯ ಎನ್ನುವುದು ಮಹಿಳೆಯರಿಗೆ ಮಾತ್ರವಲ್ಲ. ಪುರುಷರಲ್ಲೂ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಪುರುಷರಲ್ಲಿ ಲೈಂಗಿಕ ಬಯಕೆ ಉಂಟುಮಾಡುವ ಟೆಸ್ಟಿರೋನ್ ಹಾರ್ಮೋನ್ ಉತ್ಪತ್ತಿ ಕಡಿಮೆಯಾದಾಗ ಸೆಕ್ಸ್ ಆಸಕ್ತಿ ಕಡಿಮೆಯಾಗುತ್ತದೆ.
ಮಾನಸಿಕ ಒತ್ತಡ
ಮಾನಸಿಕ ಒತ್ತಡ, ಖಿನ್ನತೆಯಿಂದಾಗಿ ಪುರುಷರಿಗೆ ಸೆಕ್ಸ್ ಬೇಡವೆನಿಸಬಹುದು. ಹಾಗಾಗಿ ಮೊದಲು ಒತ್ತಡ ನಿವಾರಣೆ ಬಗ್ಗೆ ಗಮನ ಹರಿಸಿ.
ದುರಾಭ್ಯಾಸ
ಧೂಮಪಾನ, ಮಧ್ಯಪಾನದಂತಹ ದುರಾಭ್ಯಾಸಗಳಿದ್ದರೆ ಸೆಕ್ಸ್ ಹೆಚ್ಚು ಆಸಕ್ತಿಕರ ಎನಿಸದು. ಮಾದಕ ವಸ್ತುಗಳು ಸೆಕ್ಸ್ ಬಯಕೆಗಳನ್ನು ಕಡಿಮೆ ಮಾಡುತ್ತವೆ.
ವಯಸ್ಸು
ವಯಸ್ಸಾದಂತೆ ದೇಹದಲ್ಲಾಗುವ ಬದಲಾವಣೆಗಳು ಪುರುಷರಲ್ಲೂ ಲೈಂಗಿಕಾಸಕ್ತಿ ಕುಗ್ಗುವಿಕೆಗೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.