Publish Date: Sat, 30 Mar 2019 (10:06 IST)
Updated Date: Sat, 30 Mar 2019 (10:08 IST)
ಬೆಂಗಳೂರು: ಹೆಚ್ಚು ರೊಮ್ಯಾಂಟಿಕ್ ಆಗಿರುವವರು ಪುರುಷರೋ ಮಹಿಳೆಯರೋ? ಹೀಗೊಂದು ಪ್ರಶ್ನೆ ನಿಮಗೆ ಎದುರಾಗಬಹುದು. ಅದಕ್ಕೆ ಈಗ ಡೇಟಿಂಗ್ ಆಪ್ ಒಂದು ಉತ್ತರ ಕಂಡುಕೊಂಡಿದೆ.
ಓಕೆಕ್ಯುಪಿಡ್ ಎನ್ನುವ ಡೇಟಿಂಗ್ ಆಪ್ ಒಂದು ತನ್ನ ಬಳಕೆದಾರರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಈ ಸಂದಿಗ್ಧತೆಗೆ ಉತ್ತರ ಕಂಡುಕೊಂಡಿದೆ. ಈ ಡೇಟಿಂಗ್ ಆಪ್ ನಡೆಸಿದ ಸಮೀಕ್ಷೆ ಪ್ರಕಾರ ಹೆಚ್ಚು ರೊಮ್ಯಾಂಟಿಕ್ ಆಗಿರುವವರು ಪುರುಷರು!
ರೊಮ್ಯಾನ್ಸ್ ವಿಚಾರಕ್ಕೆ ಬಂದರೆ ಪುರುಷರು ಹೆಚ್ಚು ಮುಕ್ತವಾಗಿರುತ್ತಾರೆ. ಆದರೆ ಮಹಿಳೆಯರು ವ್ಯಾಲೆಂಟೈನ್ಸ್ ಡೇ ಮುಂತಾದ ರೊಮ್ಯಾಂಟಿಕ್ ದಿನಗಳು, ಸಂದರ್ಭಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ