Select Your Language

Notifications

webdunia
webdunia
webdunia
webdunia

ನಿಮ್ಮ ದೈನಂದಿನ ಈ ಆಹಾರಗಳು ಮೂಳೆಗಳ ದುರ್ಬಲತೆಗೆ ಕಾರಣವಾಗುತ್ತದೆಯಂತೆ

ನಿಮ್ಮ ದೈನಂದಿನ ಈ ಆಹಾರಗಳು ಮೂಳೆಗಳ ದುರ್ಬಲತೆಗೆ ಕಾರಣವಾಗುತ್ತದೆಯಂತೆ
ಬೆಂಗಳೂರು , ಶನಿವಾರ, 30 ಮಾರ್ಚ್ 2019 (10:05 IST)
ಬೆಂಗಳೂರು : ಮನುಷ್ಯರಿಗೆ ವಯಸ್ಸಾದ ಮೇಲೆ ಮೂಳೆಗಳು ದರ್ಬಲವಾಗುವುದು ಸಹಜ. ಆದರೆ ಕೆಲವರಿಗೆ ಮಧ್ಯ ವಯಸ್ಸಿನಲ್ಲಿಯೇ ಮೂಳೆಗಳ ಸಮಸ್ಯೆ ಶುರುವಾಗುತ್ತದೆ. ಇದಕ್ಕೆ ನಮ್ಮ ದೈನಂದಿನ ಆಹಾರ ಕೂಡ ಮುಖ್ಯ ಕಾರಣ. ಅಂತಹ  ಆಹಾರಗಳು ಯಾವುದೆಂಬುದು ಇಲ್ಲಿದೆ ನೋಡಿ. 


* ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಧಿಕ ಕಾಫಿ ಸೇವನೆಯಿಂದ ಮೂಳೆಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ಅಸ್ಟಿಯೊಪೊರೋಸಿಸ್ ಸಮಸ್ಯೆಗೆ ಒಳಗಾಗುತ್ತದೆ.


* ಬರ್ಗರ್, ಪಿಜ್ಜಾ ಮತ್ತು ಪಾಸ್ತದಂತಹ ಜಂಕ್ ಫುಡ್​ ಗಳಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ. ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಕ್ಯಾಲ್ಸಿಯಂ ಪ್ರಯಾಣವನ್ನು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ದುರ್ಬಲಗೊಳ್ಳುತ್ತದೆ.


* ಅತಿಯಾದ ಮದ್ಯ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್-ಡಿ ಕೊರತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸಹ ಮೂಳೆಗಳು ದುರ್ಬಲವಾಗುತ್ತದೆ.


* ವಿಟಮಿನ್-ಎ ಕೊರತೆಯನ್ನು ನೀಗಿಸಲು ಸಪ್ಲಿಮೆಂಟ್​ಗಳನ್ನು ಸೇವಿಸುತ್ತಿದ್ದರೆ ಕೂಡ ಮೂಳೆಗಳು ದುರ್ಬಲವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಯ ಬಳಿಕ ಮತ್ತೊಮ್ಮೆ ಸಂಗಾತಿಯನ್ನು ಸ್ಪರ್ಶಿಸಬೇಕೆಂದು ಅನಿಸುವುದಿಲ್ಲ!