Select Your Language

Notifications

webdunia
webdunia
webdunia
webdunia

ನಿನ್ನ ಕೈಲಾಗಲ್ಲ ಸುಮ್ಮನೆ ಮಲಗು ಎನ್ನುತ್ತಿರುವ ಪತ್ನಿ?ಏನು ಮಾಡಲಿ?

ನಿನ್ನ ಕೈಲಾಗಲ್ಲ ಸುಮ್ಮನೆ ಮಲಗು ಎನ್ನುತ್ತಿರುವ ಪತ್ನಿ?ಏನು ಮಾಡಲಿ?
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (20:35 IST)
ಪ್ರಶ್ನೆ: ವಿವಾಹವಾಗಿ ಐದು ತಿಂಗಳುಗಳಾಗಿವೆ. ಆವಾಗ ನಾನು ಲೈಂಗಿಕ ಕ್ರಿಯೆಯಲ್ಲಿ ತೋರಿಸುತ್ತಿದ್ದ ಆಸಕ್ತಿ ಕಂಡು ಪತ್ನಿ ದಿಗಿಲುಗೊಂಡಿದ್ದಳು. ಪ್ಲೀಸ್ ಸಾಕು ಬಿಡಿ. 24 ಗಂಟೆ ಇದೇ ಕೆಲಸನಾ? ನಿಮ್ಮ ದಮ್ಮಯ್ಯ ಅಂತೀನಿ ಬಿಟ್ಟುಬಿಡಿ ಎನ್ನುತ್ತಿದ್ದಳು. ಇದೀಗ ಎಲ್ಲಾ ರಿವರ್ಸ್ ಆಗಿದೆ. ಬನ್ನಿ ಆ ಕೆಲಸ ಮಾಡುವಾ ಎಂದು ಕರೆಯುತ್ತಾಳೆ. ಆದರೆ, ನನ್ನ ಕೈಲಾಗುತ್ತಿಲ್ಲ. ಯಾವಾಗಲಾದರೂ ಒಮ್ಮೆ ಮಾಡಿದರೆ ಆಕೆಗೆ ತೃಪ್ತಿ ದೊರಕುತ್ತಿಲ್ಲ. ಇದರಿಂದ ಯಾವಾಗ ನೋಡಿದರೂ ನಿಮ್ಮ ಕೈಲಾಗಲ್ಲ ಸುಮ್ಮನೆ ಮುಚ್ಕೊಂಡು ಮಲಗಿ ಎನ್ನುತ್ತಾಳೆ. ನಾನು ಯಾಕೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಅರ್ಥವಾಗುತ್ತಿಲ್ಲ. ಇದೀಗ ಬೇರೆ ಗಂಡಸರಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾಳೆ ಏನು ಮಾಡಲಿ ತಿಳಿಯುತ್ತಿಲ್ಲ ಪ್ಲೀಜ್ ಹೆಲ್ಪ್ ಮಾಡಿ. 
ಉತ್ತರ: ದಾಂಪತ್ಯ ಜೀವನದಲ್ಲಿ ಅನೇಕ ದಂಪತಿಗಳು ಇಂತಹ ಸಮಸ್ಯೆಯನ್ನುಎದುರಿಸುತ್ತಿದ್ದಾರೆ. ನೀವು ಲೈಂಗಿಕತೆಯಲ್ಲಿ ತೊಡಗಬೇಕಾದಲ್ಲಿ ದೈಹಿಕವಾಗಿ ಮಾನಸಿಕವಾಗಿ ಸಿದ್ದರಾಗಬೇಕಾಗುತ್ತದೆ. ಕೆಲವರಲ್ಲಿ ಥೈರಾಯಿಡ್‌ಗೆ ಸಂಬಂಧಿಸಿದ ರೋಗಗಳು ಕೂಡಾ ಲೈಂಗಿಕತೆಯನ್ನು ಕುಗ್ಗಿಸುವ ಸಾಧ್ಯತೆಗಳಿವೆ.
 
ಅದಷ್ಟೆ ಅಲ್ಲ, ಮದ್ಯಸೇವನೆ, ಸೀಗರೇಟು ಸೇವನೆ ಸೇರಿದಂತೆ ಕೆಟ್ಟ ಚಟಗಳಿಂದ ದೂರವಿರಿ. ಕಚೇರಿಯ ಕೆಲದ ಒತ್ತಡವನ್ನು ಮನೆಗೆ ತರಬೇಡಿ.ಮನೆಯಲ್ಲಿ ಪತ್ನಿಯೊಂದಿಗೆ ಪ್ರೇಮಸಲ್ಲಾಪದಲ್ಲಿ ತೊಡಗಿ ನಿಧಾನವಾಗಿ ನಿಮ್ಮ ಶರೀರವನ್ನು ಲೈಂಗಕತೆಗೆ ಸಿದ್ದಪಡಿಸಿಕೊಳ್ಳಿ. ಇದೇ ರೀತಿ ಮುಂದುವರಿದಲ್ಲಿ ಕೆಲ ದಿನಗಳಲ್ಲಿಯೇ ನಿಮ್ಮ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಇಲ್ಲವಾದಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ ನಿಮ್ಮ ತೊಂದರೆಯನ್ನು ನಿವಾರಿಸಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ರಾತ್ರಿ ವಾಂತಿ ಮಾಡಿದ್ದಾಳೆಂದು ಪತ್ನಿಗೆ ಕನ್ಯತ್ವಪರೀಕ್ಷೆ ಮಾಡಿಸಿದ ಪತಿ..ನಂತ್ರ?