Select Your Language

Notifications

webdunia
webdunia
webdunia
webdunia

ಸನ್ ಬರ್ನ್ ನಿಂದ ಕೈಕಾಲು ಬೆನ್ನ ಮೇಲಿನ ಸ್ಕಿನ್ ಕಳೆಗುಂದಿದ್ದರೆ ಈ ವಿಧಾನ ಬಳಸಿ

ಸನ್ ಬರ್ನ್ ನಿಂದ ಕೈಕಾಲು ಬೆನ್ನ ಮೇಲಿನ ಸ್ಕಿನ್ ಕಳೆಗುಂದಿದ್ದರೆ ಈ ವಿಧಾನ ಬಳಸಿ
ಬೆಂಗಳೂರು , ಭಾನುವಾರ, 7 ಜನವರಿ 2018 (08:29 IST)
ಬೆಂಗಳೂರು : ಧೂಳು , ಸನ್ ಬರ್ನ್ ಗಳಿಂದ ಕೈಕಾಲು ಹಾಗು ಬೆನ್ನುನ ಮೇಲಿನ ಸ್ಕಿನ್ ತುಂಬಾ ಡಲ್ ಆಗಿ ಕಳೆಗುಂದಿರುತ್ತದೆ. ಇದಕ್ಕೆ ದುಬಾರಿ ಕ್ರೀಂಗಳನ್ನು ಬಳಸಿ ಸ್ಕಿನ್ ಅನ್ನು ಹಾಳುಮಾಡಿಕೊಳ್ಳುವ ಬದಲು ನೈಸರ್ಗಿಕವಾಗಿ ಸಿಗುವಂತಹ ವಸ್ತುಗಳನ್ನು ಬಳಸಿ ಸ್ಕಿನ್ ಅನ್ನು ಆಕರ್ಷಕವಾಗಿಸಬಹುದು.

 
ಮೊದಲು ಸನ್ ಬರ್ನ್ ಆಗಿರುವ ಸ್ಕಿನ್ ನ ಮೇಲೆ ಬಾದಾಮಿ ಎಣ್ಣೆಯನ್ನು ಹಚ್ಚಿ 10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ನಂತರ ಒಂದು ಬೌಲ್ ನಲ್ಲಿ 1 ಚಮಚ ಅಕ್ಕಿಹಿಟ್ಟು, 1 ಚಮಚ ನೆಲ್ಲಿಕಾಯಿ ಪುಡಿ, 2 ಚಮಚ ಬಟಾಟೆ ಜ್ಯೂಸ್, ½ ಚಮಚ ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದನ್ನು ಸನ್ ಬರ್ನ್ ಸ್ಕಿನ್ ಗಳ ಮೇಲೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ. 15 ನಿಮಿಷ  ಬಿಟ್ಟು ಒಂದು ಬಟ್ಟೆಯಿಂದ ಒರೆಸಿಕೊಳ್ಳಿ. ಇದಾದ ನಂತರ ಪಪ್ಪಾಯ ಹಣ್ಣನ್ನು ಕಿವುಚಿ ಅದರಲ್ಲಿ 2 ಚಮಚ ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಅದನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ 10 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಿದರೆ ಅದ್ಬುತ ಆಕರ್ಷಕ ತ್ವಚೆ ನಿಮ್ಮದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು ರಾತ್ರಿ ನಿದ್ರಿಸುವಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರಾ...? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ