Publish Date: Thu, 04 Jan 2018 (08:17 IST)
Updated Date: Thu, 04 Jan 2018 (08:18 IST)
ಬೆಂಗಳೂರು: ಬೆನ್ನು ಅಥವಾ ಸೊಂಟ ನೋವು ಬಂದಾಗ ತಕ್ಷಣ ನಾವು ಏನು ಮಾಡುತ್ತೇವೆ? ಪೈನ್ ಬಾಮ್ ಹಚ್ಚಿ ಬಿಸಿ ನೀರಿನ ಶಾಖ ಕೊಡುತ್ತೇವೆ. ಇದು ಸರಿಯೇ?
ತಜ್ಞರ ಪ್ರಕಾರ ಎಲ್ಲಾ ಬೆನ್ನು ನೋವಿಗೂ ಬಿಸಿ ನೀರಿನ ಶಾಖ ಪರಿಹಾರವಲ್ಲ. ಅದು ನಮ್ಮ ತಪ್ಪು ಕಲ್ಪನೆ. ಇದರಿಂದ ಉರಿಯೂತ ಮತ್ತಷ್ಟು ಹೆಚ್ಚಬಹುದು ಎಂಬುದು ತಜ್ಞರ ಅಭಿಪ್ರಾಯ. ತೀರಾ ತಾಳಲಾರದ ನೋವಿದ್ದಾಗ ಮಾತ್ರ ಬಿಸಿ ನೀರಿನ ಶಾಖ ಕೊಡಬಹುದು ಎನ್ನುತ್ತಾರೆ ತಜ್ಞರು.
ಇಲ್ಲದಿದ್ದರೆ, ಐಸ್ ಪ್ಯಾಕ್ ಇಡುವುದೇ ಉತ್ತಮ. ಎರಡು ಮೂರು ದಿನ ಇದೇ ರೀತಿ ಮಾಡುತ್ತಿದ್ದರೆ ಬೆನ್ನು ನೋವು ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ