Publish Date: Wed, 03 Jan 2018 (11:25 IST)
Updated Date: Wed, 03 Jan 2018 (11:30 IST)
ಮುಂಬೈ : ಬಾಲಿವುಡ್ ನ ಖ್ಯಾತ ನಟ ಧರ್ಮೇಂದ್ರ ಅವರ ಮನೆಗೆ ಸಲ್ಮಾನ್ ಖಾನ್ ಅವರು ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಧರ್ಮೇಂದ್ರ ಅವರಿಗೆ ಈಗ 82 ವರ್ಷ ವಯಸ್ಸಾಗಿದ್ದು, ಆಗಾಗ ಅವರ ಆರೋಗ್ಯ ಕೆಡುತ್ತಿತ್ತು. ಅದಕ್ಕಾಗಿ ಸಲ್ಮಾನ್ ಖಾನ್ ಅವರು ಅವರ ಮನೆಗೆ ಅಚ್ಚರಿಯ ಭೇಟಿ ನೀಡಿ ಅವರ ಕುಶಲಕ್ಷೇಮ ವಿಚಾರಿಸಿದರು. ಸಲ್ಮಾನ್ ಖಾನ್ ಅವರು ಧಿಡೀರನೆ ಮನೆಗೆ ಆಗಮಿಸಿದ್ದನ್ನು ಕಂಡು ಧರ್ಮೇಂದ್ರ ಅವರು ತುಂಬಾ ಸಂತೋಷಪಟ್ಟರು. ಹಾಗೆ ಸಲ್ಮಾನ್ ಖಾನ್ ಅವರು ಅವರ ಆರೋಗ್ಯವರ್ಧನೆಗೆ ಶುಭಕೋರಿದನ್ನು ಕೇಳಿ ಖುಷಿಪಟ್ಟರು.
ಧರ್ಮೇಂದ್ರ ಅವರು ಸಲ್ಮಾನ್ ಅವರ ಜೊತೆ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಲ್ಲಿ ನಟಿಸಿದ್ದು, ಆ ವೇಳೆ ಅವರು ಭೇಟಿ ಮಾಡಿದ್ದಾಗ ತೆಗೆದ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ ಸಲ್ಲು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆ ‘ನಿನ್ನ ಅಚ್ಚರಿ ಭೇಟಿಯಿಂದ ನನಗೆ ಅತೀವ ಸಂತಸವಾಗಿದೆ. ನೀನು ಎಂದಿಗೂ ನನ್ನ ಮಗನಿದ್ದಂತೆ ‘ ಎಂದು ಆ ಫೋಟೋಗೆ ಶೀರ್ಷಿಕೆ ಬರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ