Select Your Language

Notifications

webdunia
webdunia
webdunia
webdunia

ಅಸ್ತಮಾದಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಹಾರ

ಅಸ್ತಮಾದಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಹಾರ
ಬೆಂಗಳೂರು , ಮಂಗಳವಾರ, 2 ಜನವರಿ 2018 (11:38 IST)
ಬೆಂಗಳೂರು : ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದೆ. ಅಸ್ತಮಾ ಇರುವವರಿಗೆ ತುಂಬಾ ಆಯಾಸ, ಸುಸ್ತು, ಉಸಿರಾಟದ ತೊಂದರೆ, ಮಾತನಾಡುವಾಗ ಉಬ್ಬಸ ಬರುವುದು ಈ ತರಹದ  ಸಮಸ್ಯೆಗಳು ಕಾಡುತ್ತಿರುತ್ತದೆ. ಇದು ದೊಡ್ಡವರಿಗೆ ಮಾತ್ರವಲ್ಲ ಚಿಕ್ಕವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಮನೆಮದ್ದಿನಿಂದ ಕಡಿಮೆಮಾಡಬಹುದು. ಈ ಮನೆಮದ್ದನ್ನು ಸರಿಯಾಗಿ ಪ್ರತಿದಿನ ತೆಗೆದುಕೊಳ್ಳುವುದರಿಂದ ಅಸ್ತಮಾದಿಂದ ಪಾರಾಗಬಹುದು.

 
250ಎಂಲ್ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ 4-5 ಬೆಳ್ಳುಳ್ಳಿ ಹಾಗು 2 ಚಮಚ ಸಕ್ಕರೆ ಸೇರಿಸಿ 5 ನಿಮಿಷ ಕುದಿಸಿ. ನಂತರ ಅದು ಉಗುರು ಬೆಚ್ಚಗಾದ ಮೇಲೆ ಅದನ್ನು ಸೋಸಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ಅದನ್ನು ಕುಡಿಯಬೇಕು. ಇದು ನಮ್ಮ ಶ್ವಾಸಕೋಶವನ್ನು ಸ್ವಚ್ಚ ಮಾಡುತ್ತದೆ ಹಾಗೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಿದ ನಂತರ 1ಚಮಚ ಬೆಳ್ಳುಳ್ಳಿ ರಸ, 1 ಚಮಚ ಶುಂಠಿ ರಸ, 1ಚಮಚ ವೀಳ್ಯದೆಲೆ ರಸ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮೂರು ಹೊತ್ತು(ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ) ಊಟ ಆದ ಮೇಲೆ 10 ನಿಮಿಷ ಬಿಟ್ಟು ತೆಗೆದುಕೊಳ್ಳಬೇಕು. ಇದರಿಂದ ಅಸ್ತಮಾ ಎಷ್ಟೇ ವರ್ಷದಿಂದ ಇದ್ದರೂ 2 ವಾರದಲ್ಲಿ ಕಡಿಮೆಯಾಗುತ್ತದೆ. ಅದರ ಜೊತೆಗೆ ಧೂಳಿನಿಂದ ದೂರವಿರಬೇಕು, ಧೂಮಪಾನ ಮಾಡಬಾರದು ಹಾಗು ಕೂಲ್ ಡ್ರಿಂಕ್ಸ್ ಗಳನ್ನು ಕುಡಿಯಬಾರದು. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಲೆಹೊಟ್ಟಿನ ನಿವಾರಣೆಗೆ ಇಲ್ಲಿದೆ ನೋಡಿ ಮನೆಮದ್ದು