Select Your Language

Notifications

webdunia
webdunia
webdunia
webdunia

ಸ್ವಾದಿಷ್ಠಕರವಾದ ಮೂಲಂಗಿ ಪರೋಟಾ

ಮೂಲಂಗಿ ಪರೋಟಾ

ಅತಿಥಾ

ಬೆಂಗಳೂರು , ಬುಧವಾರ, 3 ಜನವರಿ 2018 (15:48 IST)
ಬೇಕಾಗುವ ಸಾಮಗ್ರಿ:
 
ತುರಿದ ಮೂಲಂಗಿ - 2
ಈರುಳ್ಳಿ- 1
ಹಸಿ ಮೆಣಸಿನ ಕಾಯಿ -2 ರಿಂದ 3
ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು
ಒಂದು ಚಮಚ ಚಾಟ್ ಮಸಾಲಾ
ಒಂದು ಚಮಚ ಜೀರಿಗೆ
2 ಕಪ್ ಗೋಧಿ ಹಿಟ್ಟು
ಅರ್ಧ ಕಪ್ ಮೈದಾ
ಚಿಟಿಕೆಯಷ್ಟು ಅಜವಾನ
2 ಚಮಚ ತುಪ್ಪ
ಸ್ವಲ್ಪ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: 
 
- ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಬಿಸಿಯಾದಾಗ ಜೀರಿಗೆ ಮತ್ತು ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. 
- ಸ್ವಲ್ಪ ಸಮಯದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಈ ಎಲ್ಲ ಮಿಶ್ರಣಕ್ಕೆ ತುರಿದ ಮೂಲಂಗಿಯನ್ನು ಹಾಕಿ ಕಡಿಮೆ ಉರಿಯಲ್ಲಿ 8-10 ನಿಮಿಷ ಹುರಿಯಿರಿ. 
- ಅದಕ್ಕೆ ಉಪ್ಪು, ಚಾಟ್ ಮಸಾಲ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಹುರಿದಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಮೈದ ಹಿಟ್ಟನ್ನು, ರುಚಿಗೆ ತಕ್ಕ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ, ಚಿಕ್ಕ ಚಿಕ್ಕ ಉಂಡೆ ಮಾಡಿ ಪುರಿ ಆಕಾರದಲ್ಲಿ ಲಟ್ಟಿಸಿಕೊಂಡು ಅದರ ಮಧ್ಯೆ ಮೂಲಂಗಿ ಮಿಶ್ರಣವನ್ನು ಹಾಕಿ ಇನ್ನೊಮ್ಮೆ ಲಟ್ಟಿಸಿಕೊಂಡು ಬಿಸಿಯಾದ ತವಾದ ಮೇಲೆ ಎರಡು ಬದಿಗೆ ಎಣ್ಣೆ ಸವರಿ ಬೇಯಿಸಿಕೊಳ್ಳಿ. 
- ಈಗ ಚೆನ್ನಾಗಿ ಬೆಂದ ಮೂಲಂಗಿ ಪರೋಟ ಸವಿಯಲು ಸಿದ್ಧ.
- ತುಪ್ಪ, ಮೊಸರು ಅಥವಾ ಟೊಮ್ಯಾಟೊ ಸಾಸ್ ಜತೆ ಸವಿಯಿರಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಫುಡ್‌ ಪಾಯ್ಸನ್‌‌ಗೆ ಇದನ್ನು ಸೇವಿಸಿ