ಮುಂಬೈ: ದಂಗಲ್ ಸಿನಿಮಾ ಖ್ಯಾತಿಯ ನಟಿ ವಾಸಿಂ ಜೈರಾ ಅವರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
 
ನಿನ್ನೆಯಷ್ಟೇ ನಟಿ ತಮಗೆ ವಿಮಾನದಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾಗಿ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದರು.
									
								
			        							
								
																	ತನಗೆ ಹಿಂದಿನಿಂದ ಯಾರೋ ಬೆನ್ನು ಸವರಿದ ಅನುಭವವಾಯಿತು. ನೋಡಿದರೆ ವ್ಯಕ್ತಿಯೊಬ್ಬ ನನ್ನ ಹಿಂದೆ ನಿಂತಿದ್ದ ಎಂದು ವಿಡಿಯೋ ಸಂದೇಶದಲ್ಲಿ ನಟಿ ಅಳುತ್ತಾ ಹೇಳಿಕೊಂಡಿದ್ದರು. ಇದು ಭಾರೀ ವೈರಲ್ ಆಗಿತ್ತು.
									
										
								
																	ಇದೀಗ ವಿಕಾಸ್ ಸಚ್ ದೇವ್ ಎಂಬ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಘಟನೆ ನಡೆದ ವಿಸ್ತಾರಾ ಏರ್ ಲೈನ್ಸ್ ಕೂಡಾ ಆಂತರಿಕ ತನಿಖೆಗೆ ಆದೇಶಿಸಿದೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ