Select Your Language

Notifications

webdunia
webdunia
webdunia
webdunia

ಶಾಕಿಂಗ್! ಮಿ.ಪರ್ಫೆಕ್ಟ್ ಖಾನ್ ವೈವಾಹಿಕ ಜೀವನದಲ್ಲಿ ಬಿರುಕು?!

webdunia
Mumbai , ಮಂಗಳವಾರ, 16 ಮೇ 2017 (11:23 IST)
ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ವೈವಾಹಿಕ ಜೀವನ ಮುರಿದು ಬೀಳುವ ಹಂತದಲ್ಲಿದೆಯಾ? ಹಾಗೊಂದು ಸುದ್ದಿ ಬಾಲಿವುಡ್ ವಲಯಲ್ಲಿ ಹರಿದಾಡುತ್ತಿದೆ.

 
ಅಮೀರ್ ಮತ್ತು ಪತ್ನಿ ಕಿರಣ್ ರಾವ್ ನಡುವೆ ಈಗ ಎಲ್ಲವೂ ಸರಿಯಿಲ್ಲ ಎಂಬ ಗಾಸಿಪ್ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಸದ್ಯದಲ್ಲೇ ಇಬ್ಬರೂ ದೂರವಾಗಲಿದೆ ಎಂಬ ಗುಸು ಗುಸು ಹಬ್ಬಿದೆ.

ಅಷ್ಟಕ್ಕೂ ಇದಕ್ಕೆ ಕಾರಣ ‘ದಂಗಲ್’ ಚಿತ್ರದ ನಾಯಕಿ ಫಾತಿಮಾ ಜತೆ ಅಮೀರ್ ಒಡನಾಟ. ಈಕೆಯ ಜತೆ ಅಮೀರ್ ಇತ್ತೀಚೆಗೆ ಪಾರ್ಟಿ, ಜಿಮ್ ಎಂದೆಲ್ಲಾ ಜತೆಯಾಗಿ ಓಡಾಡುತ್ತಿರುವುದು ಕಿರಣ್ ರಾವ್ ಗೆ ಗೊತ್ತಾಗಿದೆ.

ಇದೇ ಕಾರಣಕ್ಕೆ ಕಿರಣ್ ಅಮೀರ್ ಜತೆಗೆ ಜಗಳವಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿದೆ. ಇತ್ತೀಚೆಗೆ ವಿವಾದಿತ ನಿರ್ದೇಶಕ ಕಮಲ್ ಆರ್ ಖಾನ್ ಕೂಡಾ ಇದನ್ನು ಟ್ವಿಟರ್ ನಲ್ಲಿ ಹೇಳಿದ್ದರು.

ಅಮೀರ್ ಮತ್ತು ಕಿರಣ್ ರಾವ್ ಲಗಾನ್ ಚಿತ್ರೀಕರಣದ ವೇಳೆ ಪರಿಚಯವಾಗಿ ಪ್ರೇಮಿಗಳಾಗಿ ಕೊನೆಗೆ ವಿವಾಹವಾಗಿದ್ದರು. ಅಮೀರ್ ಗೆ ಇದು ಎರಡನೇ ಮದುವೆ. ಕಿರಣ್ ಸ್ನೇಹಕ್ಕೆ ಬಿದ್ದ ಮೇಲೆ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು ಅಮೀರ್. ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿದ್ದಾರೆ. ಕಿರಣ್ ರಾವ್ ಮತ್ತು ಅಮೀರ್ ಗೆ ಆಝಾದ್ ರಾವ್ ಖಾನ್ ಎಂಬ ಪುತ್ರನಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ ಮಾತೇನು?