Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ ಮಾತೇನು?

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ ಮಾತೇನು?
Mumbai , ಸೋಮವಾರ, 15 ಮೇ 2017 (10:46 IST)
ಮುಂಬೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಜೀವನದ ಬಗ್ಗೆ ಆಗಾಗ ಊಹಾಪೋಹಗಳು ಹರಿದಾಡುತ್ತವೆ. ಇದೀಗ ಅಭಿಮಾನಿಗಳೊಂದಿಗೆ ಮಾತನಾಡುವಾಗ ರಜನಿ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 
ರಾಜಕೀಯ ಪಕ್ಷಗಳು ಆಗಾಗ ನನ್ನ ಹೆಸರನ್ನು ಬಳಸಿಕೊಂಡು ಮತ ಗಳಿಸುತ್ತವೆ. ಆದರೆ ನನಗೆ ರಾಜಕೀಯ ಸೇರುವ ಯಾವುದೇ ಉದ್ದೇಶವಿಲ್ಲ ಎಂದು ರಜನಿ ಸ್ಪಷ್ಟಪಡಿಸಿದ್ದಾರೆ. ಚೆನ್ನೈಯಲ್ಲಿ ಅಭಿಮಾನಿಗಳೊಂದಿಗೆ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ ತಮ್ಮ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಮಾತ್ರ ರಜನಿ ಅಭಿಮಾನಿಗಳನ್ನು ನೆನಪಿಸಿಕೊಳ್ಳುತ್ತಾರೆ ಎಂಬ ಟೀಕಾಕಾರರಿಗೂ ಅವರು ಉತ್ತರ ನೀಡಿದ್ದಾರೆ. ನಾನು ಕೆಟ್ಟವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ. ನನಗೆ ಇಷ್ಟು ಜನರ ಅಭಿಮಾನವೇ ಸಾಕು. ಇವರ ಪ್ರೀತಿ ಇರುವಾಗ ಅನವಶ್ಯಕ ವಿಚಾರಗಳ ಬಗ್ಗೆ ಮಾತನಾಡಿಕೊಂಡು ವಿವಾದ ಸೃಷ್ಟಿಸುವದ ಅಗತ್ಯ ನನಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಚಿತ್ರ ನಿರ್ಮಾಪಕ ಆತ್ಮಹತ್ಯೆ