Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಚಿತ್ರ ನಿರ್ಮಾಪಕ ಆತ್ಮಹತ್ಯೆ

ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಚಿತ್ರ ನಿರ್ಮಾಪಕ ಆತ್ಮಹತ್ಯೆ
Mumbai , ಸೋಮವಾರ, 15 ಮೇ 2017 (07:33 IST)
ಮುಂಬೈ: ಮಾಡಿದ ಸಿನಿಮಾ ಸೋತರೆ ಚಿತ್ರ ನಿರ್ಮಾಪಕ ಮುಳುಗುತ್ತಾನೆ ಎನ್ನುವುದು ಈ ನಿರ್ಮಾಪಕನ ಪಾಲಿಗೆ ಅಕ್ಷರಶಃ ನಿಜವಾಯಿತು. ಅದಕ್ಕೇ ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 
ಅತುಲ್ ತಪ್ಕೀರ್ ಎಂಬ ಮರಾಠಿ ಸಿನಿಮಾ ನಿರ್ಮಾಪಕ ಆತ್ಮಹತ್ಯೆ ಮಾಡಿಕೊಂಡವರು. 2015 ರಲ್ಲಿ ಧೋಲ್ ತಶಾ ಎಂಬ ಚಿತ್ರ ನಿರ್ಮಿಸಿ ಸೋಲು ಕಂಡಿದ್ದ. ಇದರಿಂದ ಆತನ ಪತ್ನಿ ಜತೆಗಿನ ಸಂಬಂಧವೇ ಹಾಳಾಯ್ತು.

ಆರು ತಿಂಗಳಿನಿಂದ ಮನೆಯಿಂದ ದೂರವಿದ್ದೆ. ನನ್ನ ಪತ್ನಿ ನನ್ನ ಮಕ್ಕಳನ್ನು ನೋಡಲೂ ಅವಕಾಶ ನೀಡುತ್ತಿಲ್ಲ. ಇದೀಗ ನಾನು ನನ್ನ ಅಮ್ಮನ ಬಳಿಗೆ (ತೀರಿಕೊಂಡ) ಹೋಗುತ್ತಿದ್ದೇನೆ’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡು ವಿಷ ಸೇವಿಸಿ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ