Webdunia - Bharat's app for daily news and videos

Install App

ಪ್ರತಿದಿನ ಈ ಐದು ಯೋಗಾಸನಗಳನ್ನು ಪ್ರಯೋಜನ ನೋಡಿ

Webdunia
ಮಂಗಳವಾರ, 28 ಡಿಸೆಂಬರ್ 2021 (05:59 IST)
ಪ್ರತಿನಿತ್ಯ ಉತ್ತಮ ಆರೋಗ್ಯ ನಮ್ಮದಾಗಬೇಕೆಂದರೆ ಈ ಐದು ಆಸನಗಳನ್ನು ಮಾಡಿದರೆ ಒಳ್ಳೆಯ ಹಾಗೂ ದೇಹಕ್ಕೆ ತುಂಬಾ ಪ್ರಯೋಜಮಗಳನ್ನು ಸಫಲತೆ ಕಾಣಲು ಸಾಧ್ಯ.

ಭುಜಂಗಾಸನ

ಇದರಲ್ಲಿ ದೇಹದ ಭಂಗಿಯು ಹೆಡೆ ಎತ್ತಿದ ಹಾವಿನಂತೆ ಇರುತ್ತದೆ. ಆದ್ದರಿಂದ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು, ಮೊದಲು ನಿಮ್ಮ ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿ. ನಂತರ ಎರಡೂ ಕಾಲುಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮತ್ತು ಕಾಲುಗಳನ್ನು ನೇರವಾಗಿ ಇರಿಸಿ. ಈಗ ಕೈಗಳನ್ನು ನೆಲ್ಲಕ್ಕೆ ಊರಿ ತಲೆ ಎತ್ತಿ. ದೇಹದ ಭಂಗಿಯು ಹಾವಿನ ಹೆಡೆಯಂತೆ ಕಾಣುತ್ತದೆ. ಈ ಮಧ್ಯೆ ಸೊಂಟದ ಮೇಲೆ ಹೆಚ್ಚು ಒತ್ತಡ ಕೊಡಬೇಡಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗಿ. ಇದನ್ನು ಅನುಕ್ರಮವನ್ನು ಒಮ್ಮೆಗೆ 5 ರಿಂದ 7 ಬಾರಿ ಪುನರಾವರ್ತಿಸಿ.
ಪಶ್ಚಿಮೋತ್ತಾಸನ

ಪಶ್ಚಿಮೋತ್ತಾಸನವನ್ನು ಮಾಡಲು, ಮೊದಲನೆಯದಾಗಿ ಎರಡೂ ಕಾಲುಗಳನ್ನು ನೇರವಾಗಿ ಚಾಚಿ ನಂತರ ಬಲಗಾಲನ್ನು ಮಡಚಿ ಬಲಗೈಯಿಂದ ಬಲಗಾಲಿನ ಬೆರಳನ್ನು ಹಿಡಿದುಕೊಳ್ಳಿ. ನಂತರ ಎಡಗೈಯಿಂದ ಎಡಗಾಲಿನ ಬೆರಳನ್ನು ಹಿಡಿಯಿರಿ. ಗರ್ಭಕೋಶ ಅಥವಾ ಬೆನ್ನುನೋವಿನ ಸಮಸ್ಯೆಯಿದ್ದರೆ ಈ ಆಸನವನ್ನು ಮಾಡಬೇಡಿ.

ಸೇತುಬಂಧಾಸನ

ಕಾಲುಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಸೊಂಟಕ್ಕೆ ಹತ್ತಿರಕ್ಕೆ ತನ್ನಿ. ನಿಧಾನವಾಗಿ ಉಸಿರಾಡುವಾಗ, ನಿಮ್ಮ ಕೆಳಗಿನ ಬೆನ್ನಿನ ಭಾರವನ್ನು ಮೇಲಕ್ಕೆತ್ತಿ. ಕೈಗಳಿಂದ ಪಾದಗಳನ್ನು ಹಿಡಿಯಿರಿ. ಪಾದಗಳನ್ನು ನೆಲದ ಮೇಲೆ ಬಲವಾಗಿ ಇರಿಸಿ. ತಲೆ ಮತ್ತು ಭುಜದ ಭಾಗವನ್ನು ಸಹ ನೆಲದಲ್ಲಿ ಇರಿಸಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಭಂಗಿಯಲ್ಲಿ ಇರಿ. ಅದರ ನಂತರ, ಸಾಮಾನ್ಯ ಭಂಗಿಗೆ ಹಿಂತಿರುಗಿ. ಸೇತುಬಂಧಾಸನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಎದೆ, ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ.

ಚತುರಂಗ ದಂಡಾಸನ

ನೀವು ನೇರವಾಗಿ ಮಲಗಿಕೊಳ್ಳಿ. ನಿಮ್ಮ ಕೈಗಳು ನೇರವಾಗಿರಲಿ. ನಿಮ್ಮ ಕೈಗಳ ಮೂಲಕ ಮೇಲೆದ್ದುಕೊಳ್ಳಿ. ಕಾಲುಗಳ ತುದಿ ಬೆರಳು ನೆಲಕ್ಕೆ ತಾಗಿರಲಿ. ಇದೇ ಭಂಗಿಯಲ್ಲಿ ಸುಮಾರು 10 ರಿಂದ 15 ಸೆಕೆಂಡುಗಳ ಕಾಲ ಇರಿ. ಈ ಆಸನ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ಸದೃಢವಾಗುತ್ತದೆ. ತೋಳುಗಳ ಬಲವನ್ನು ಹೆಚ್ಚಿಸುತ್ತದೆ. ಬೆನ್ನು ನೋವು ನಿವಾರಣೆಯಾಗುತ್ತದೆ.

ಚಕ್ರಾಸನ

ನೀವು ನೇರವಾಗಿ ನಿಂತುಕೊಳ್ಳಿ. ಹಿಂದಕ್ಕೆ ಸಂಪೂರ್ಣವಾಗಿ ಬಾಗಿ ನಿಮ್ಮ ಕೈಗಳನ್ನು ನೆಲಕ್ಕೆ ತಾಗಿಸಿ. ಈ ಆಸನ ಅಭ್ಯಾಸ ಮಾಡುವ ಮೂಲಕ ನೀವು ಸದೃಢರಾಗುತ್ತೀರಿ. ಬೆನ್ನು ನೋವಿನಿಂದ ಮುಕ್ತರಾಗಲು ಈ ಆಸನ ಮಾಡಿ. ಈ ಆಸನವನ್ನು ಎಳೆಯ ವಯಸ್ಸಿನಿಂದಲೂ ಮಾಡಿಕೊಂಡು ಬಂದಾಗ ವೃದ್ಧಾಪ್ಯದಲ್ಲಿ ಬೆನ್ನು ಬಾಗುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಮುಂದಿನ ಸುದ್ದಿ
Show comments