Select Your Language

Notifications

webdunia
webdunia
webdunia
webdunia

ಇಂದು ಚುನಾವಣಾ ಆಯೋಗ ಸಭೆ

ಇಂದು ಚುನಾವಣಾ ಆಯೋಗ ಸಭೆ
ನವದೆಹಲಿ , ಸೋಮವಾರ, 27 ಡಿಸೆಂಬರ್ 2021 (08:04 IST)
2022ರ ಪ್ರಾರಂಭದಲ್ಲಿ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ದೇಶದಲ್ಲಿ ಕೊರೊನಾ, ಒಮಿಕ್ರಾನ್ ಆತಂಕ ಶುರುವಾಗಿದೆ.
 
ಹೀಗಾಗಿ ದೇಶದ ಕೊವಿಡ್ 19 ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಇಂದು ಭಾರತೀಯ ಚುನಾವಣಾ ಆಯೋಗ, ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಇತರ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಿದೆ.

ಅಷ್ಟೇ ಅಲ್ಲ, ಚುನಾವಣಾ ಪ್ರಚಾರ, ಚುನಾವಣೆ ದಿನ ಮತ್ತು ಮತ ಎಣಿಕೆ ದಿನಗಳಂದು  ತೆಗೆದುಕೊಳ್ಳಬಹುದಾದ ಕೊವಿಡ್ 19 ನಿಯಂತ್ರಣಕಾ ಕ್ರಮಗಳಿಗೆ ಸಂಬಂಧಪಟ್ಟಂತೆ ಸಲಹೆಯನ್ನೂ ಚುನಾವಣಾ ಆಯೋಗದ ಸಿಬ್ಬಂದಿ, ರಾಜೇಶ್ ಭೂಷಣ್ ಬಳಿ ಕೇಳಲಿದ್ದಾರೆ.

2022ರ ಮಾರ್ಚ್ ತಿಂಗಳಲ್ಲಿ ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರ ವಿಧಾನಸಭೆಗಳ ಅವಧಿ ಮಾರ್ಚ್ ಅಂತ್ಯದ ಹೊತ್ತಿಗೆ ಮುಗಿಯಲಿದ್ದು, ಉತ್ತರಪ್ರದೇಶ ವಿಧಾನಸಭೆ ಅವಧಿ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳುವುದು.

ಹೀಗಾಗಿ ಈ ಐದು ರಾಜ್ಯಗಳಿಗೆ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು. ಚುನಾವಣಾ ದಿನಾಂಕವನ್ನು ಜನವರಿಯಲ್ಲಿ ಚುನಾವಣಾ ಆಯೋಗ ಘೋಷಣೆ ಮಾಡಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ!