Select Your Language

Notifications

webdunia
webdunia
webdunia
webdunia

ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ!

ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ!
ದೆಹಲಿ , ಸೋಮವಾರ, 27 ಡಿಸೆಂಬರ್ 2021 (07:32 IST)
ದೆಹಲಿ : ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಎಂಬಾತನನ್ನು ಬಂಧಿಸಲಾಗಿದೆ.

ಜಿಎಸ್ಟಿ ಇಂಟೆಲಿಜೆನ್ಸ್ ಅಧಿಕಾರಿಗಳಿಂದ ಉದ್ಯಮಿಯನ್ನು ಸೆರೆ ಹಿಡಿಯಲಾಗಿದೆ. ಉತ್ತರ ಪ್ರದೇಶದ ಕಾನ್ಪುರದ ಸುಗಂಧದ್ರವ್ಯ ಉದ್ಯಮಿ ಬಳಿಯಿಂದ 257 ಕೋಟಿ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಕಾನ್ಪುರದ ಸುಗಂಧ ದ್ರವ್ಯ  ಉದ್ಯಮಿ ಪಿಯೂಷ್ ಜೈನ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಇದುವರೆಗೆ ₹ 180 ಕೋಟಿ ನಗದು ವಶಪಡಿಸಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ಶುಕ್ರವಾರ ಬೆಳಿಗ್ಗೆ ತಿಳಿಸಿತ್ತು. ದಾಳಿಯ ಛಾಯಾಚಿತ್ರಗಳು ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ರಾಶಿ ಹಣವನ್ನು ತುಂಬಿರುವುದನ್ನು ತೋರಿಸಿತ್ತು.

ಎಲ್ಲಾ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ. ಪ್ರತಿ ಫೋಟೋದಲ್ಲಿ 30 ಕ್ಕೂ ಹೆಚ್ಚು ಕಟ್ಟುಗಳು ಗೋಚರಿಸುತ್ತವೆ ಎಂದು ಎನ್ಡಿಟಿವಿ ವರದಿ ಮಾಡಿದೆ. ವಶಪಡಿಸಿಕೊಂಡ ಒಟ್ಟು ಹಣವನ್ನು  ಇನ್ನೂ ಎಣಿಕೆ ಮಾಡಲಾಗುತ್ತಿದೆ. ಗುರುವಾರದಿಂದ ದಾಳಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿತ್ತು.

 


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಷ್ಟು ಏರಿಕೆಯಾದ ಚಿನ್ನ! ದರ ಎಷ್ಟು?