Select Your Language

Notifications

webdunia
webdunia
webdunia
Saturday, 5 April 2025
webdunia

ಒಮಿಕ್ರಾನ್ ಭೀತಿ ;ಒಂದೇ ದಿನ 14 ಮಂದಿಗೆ ಸೋಂಕು ಧೃಡ!

ಒಮಿಕ್ರಾನ್
ಉಡುಪಿ , ಭಾನುವಾರ, 26 ಡಿಸೆಂಬರ್ 2021 (11:25 IST)
ಉಡುಪಿ : ಓಮಿಕ್ರಾನ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಣಿಪಾಲದಲ್ಲಿ ಒಂದೇ ವಾರದಲ್ಲಿ 18 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಅದರಲ್ಲೂ ನಿನ್ನೆ (ಡಿಸೆಂಬರ್ 25) ಶನಿವಾರ 14 ಜನರಲ್ಲಿ ಕೊವಿಡ್ ಸೋಂಕು ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲೇ ಅಧಿಕ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಮಣಿಪಾಲದ 09 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

 
ಪಾಸಿಟಿವ್ ಬಂದ ವಿದ್ಯಾರ್ಥಿಗಳೆಲ್ಲ ಹೊರ ರಾಜ್ಯದವರು. ಪಾಸಿಟಿವ್ ಬಂದ 14  ಮಂದಿಯ ವರದಿಯನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಓಮಿಕ್ರಾನ್ ಶಂಕೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಗಂಟಲ ದ್ರವವನ್ನು ಕೂಡ ಬೆಂಗಳೂರಿಗೆ ಕಳುಹಿಸಿದೆ. ವಾರದ ಹಿಂದೆಯಷ್ಟೇ ವೃದ್ದ ದಂಪತಿಗಳಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು.

 
ಇದೀಗ ಒಂದೇ ಕಾಲೇಜಿನ 14 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸಿರುವ ಜಿಲ್ಲಾಡಳಿತ ಮಣಿಪಾಲ ಎಂಐಟಿ ಪರಿಸರವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಆಗಿ ಮಾಡಿದೆ ಎಂದು ಉಡುಪಿಯ ಡಿಎಚ್ಒ ಡಾ. ನಾಗಭೂಷಣ ಉಡುಪ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್!