Select Your Language

Notifications

webdunia
webdunia
webdunia
webdunia

ಜನವರಿಯಲ್ಲಿ ಸೋಂಕು ಹೆಚ್ಚಾಗಲಿದೆ!

ಜನವರಿಯಲ್ಲಿ ಸೋಂಕು ಹೆಚ್ಚಾಗಲಿದೆ!
ನವದೆಹಲಿ , ಶನಿವಾರ, 25 ಡಿಸೆಂಬರ್ 2021 (08:13 IST)
ಭಾರತದಲ್ಲಿ ಜನವರಿಯಲ್ಲಿ ಕೊವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೈದರಾಬಾದ್ ಕಿಮ್ಸ್ ನಿರ್ದೇಶಕ ಡಾ.ಸಂಬಿತ್ ಹೇಳಿದ್ದಾರೆ.

ಭಾರತ ವಿಶ್ವಕ್ಕಿಂತ ಭಿನ್ನವಲ್ಲ. ಈಗ ಎಲ್ಲೆಡೆ ಸೋಂಕು ಹೆಚ್ಚಾಗುತ್ತಿರುವಂತೆಯೇ ಭಾರತದಲ್ಲೂ ಹೆಚ್ಚಳವಾಗಲಿದೆ. ಅದೃಷ್ಟವಶಾತ್ ಮುಂಚಿನಂತೆ ನಮ್ಮಲ್ಲಿ ರೋಗತೀವ್ರತೆ ಹೆಚ್ಚಾಗಿಲ್ಲ. ಇದು ಒಳ್ಳೆಯ ಬೆಳವಣಿಗೆ’’ ಎಂದು ಡಾ.ಸಂಬಿತ್ ನುಡಿದಿದ್ದಾರೆ.

ಇಲ್ಲಿಯವರೆಗೆ, ಭಾರತದಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ರೂಪಾಂತರದ 358 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 87 ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ದೆಹಲಿಯಲ್ಲಿ 67 ಒಮಿಕ್ರಾನ್ ಪ್ರಕರಣ ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 88 ಪ್ರಕರಣ ವರದಿಯಾಗಿವೆ.

ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಮತ್ತು ಒಮಿಕ್ರಾನ್ ರೂಪಾಂತರದ ಬಗ್ಗೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಹಲವಾರು ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಹೊಸ ಕೊವಿಡ್ ನಿರ್ಬಂಧಗಳನ್ನು ಘೋಷಿಸಿವೆ. ಒಮಿಕ್ರಾನ್ ಆತಂಕದ ಕಾರಣ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ನಿರ್ಬಂಧಗಳನ್ನು ವಿಧಿಸಿದ ಮೊದಲ ರಾಜ್ಯಗಳಾಗಿದ್ದು, ಅಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಘೋಷಿಸಲಾಗಿದೆ.

ಇದುವರೆಗೆ 108 ದೇಶಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಬ್ರಿಟನ್ನಲ್ಲಿ 90,000 ಮತ್ತು ಡೆನ್ಮಾರ್ಕ್ನಲ್ಲಿ 30,000 ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಬೂಸ್ಟರ್ ಡೋಸ್ಗಳನ್ನು ನೀಡುವಂತೆ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿಯನ್ನು ರಕ್ಷಿಸಲು ಹೋಗಿ ಪೊಲೀಸರ ಅತಿಥಿಯಾದ ಪತ್ನಿ