Select Your Language

Notifications

webdunia
webdunia
webdunia
webdunia

ಕ್ರಿಕೆಟ್ ನಿಂದ ನಿವೃತ್ತರಾದ ಹರ್ಭಜನ್ ರಾಜಕೀಯದಲ್ಲಿ ಹೊಸ ಇನಿಂಗ್ಸ್?

ಕ್ರಿಕೆಟ್ ನಿಂದ ನಿವೃತ್ತರಾದ ಹರ್ಭಜನ್ ರಾಜಕೀಯದಲ್ಲಿ ಹೊಸ ಇನಿಂಗ್ಸ್?
ಮುಂಬೈ , ಶನಿವಾರ, 25 ಡಿಸೆಂಬರ್ 2021 (05:10 IST)
ಮುಂಬೈ: ಸಕ್ರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಈಗ ರಾಜಕೀಯ ಸೇರ್ಪಡೆಗೆ ತಯಾರಿ ನಡೆಸಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಕೆಲವು ದಿನಗಳ ಹಿಂದೆ ಭಜಿ, ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋ ಪ್ರಕಟಿಸಿದ್ದ ಸಿಧು, ಸದ್ಯದಲ್ಲೇ ಹೊಸ ಸುದ್ದಿ ಇದೆ ಎನ್ನುವ ರೀತಿ ಬರೆದುಕೊಂಡಿದ್ದರು.

ಹೀಗಾಗಿ ಹರ್ಭಜನ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ಕಾಂಗ್ರೆಸ್ ಪಕ್ಷದ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಈ ಹಿಂದೆ ಬಿಜೆಪಿ ಸೇರುವ ವದಂತಿಗಳನ್ನು ಸ್ವತಃ ಭಜಿ ತಳ್ಳಿ ಹಾಕಿದ್ದರು. ಆದರೆ ಕ್ರಿಕೆಟ್ ನಲ್ಲಿ ಈಗ ಚಾಲೂ ಇಲ್ಲದ ಭಜಿ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಇರೋದು ನಮಗೆ ಬೂಸ್ಟ್: ಕೆಎಲ್ ರಾಹುಲ್