Select Your Language

Notifications

webdunia
webdunia
webdunia
webdunia

ಐಪಿಎಲ್ 2022 ರ ಮೇಲೆ ಒಮಿಕ್ರಾನ್ ಭೀತಿ: ಸಭೆ ನಡೆಸಲು ಮುಂದಾದ ಬಿಸಿಸಿಐ

ಐಪಿಎಲ್ 2022 ರ ಮೇಲೆ ಒಮಿಕ್ರಾನ್ ಭೀತಿ: ಸಭೆ ನಡೆಸಲು ಮುಂದಾದ ಬಿಸಿಸಿಐ
ಮುಂಬೈ: ಐಪಿಎಲ್ 2022 ರ ಮೇಲೆ ಒಮಿಕ್ರಾನ್ ಭೀತಿ ಎದುರಾಗಿದೆ. ಏಪ್ರಿಲ್-ಮೇಯಲ್ಲಿ ನಡೆಯಲಿರುವ ಐಪಿಎಲ್ ಕೂಟದ ಬಗ್ಗೆ ಚರ್ಚಿಸಲು ಬಿಸಿಸಿಐ ಈಗ ತುರ್ತು ಸಭೆ ನಡೆಸಲು ಮುಂದಾಗಿದೆ.

ಫೆಬ್ರವರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಏಪ್ರಿಲ್ ನಲ್ಲಿ ಭಾರತದಲ್ಲೇ ಐಪಿಎಲ್ ಕೂಟವನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿತ್ತು. ಆದರೆ ಈಗ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೂಟದ ಮೇಲೆ ಆತಂಕ ಮೂಡಿದೆ.

ಹೀಗಾಗಿ ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮುಂದಿನ ತಿಂಗಳು ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆಯ್ದ ಎರಡು ತಾಣಗಳಲ್ಲಿ ಲೀಗ್ ಪಂದ್ಯಗಳನ್ನು ನಡೆಸಿ ನಾಕೌಟ್ ಹಂತದ ಪಂದ್ಯಗಳನ್ನು ಇನ್ನೊಂದು ತಾಣದಲ್ಲಿ ನಡೆಸುವ ಸಾಧ‍್ಯತೆಯಿದೆ. ಈ ಬಗ್ಗೆ ಮುಂದಿನ ತಿಂಗಳು ಅಂತಿಮ ನಿರ್ಧಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸನ್ ರೈಸರ್ಸ್ ಹೈದರಾಬಾದ್ ಸೇರಿಕೊಂಡ ಬ್ರಿಯಾನ್ ಲಾರಾ, ಡೇಲ್ ಸ್ಟೈನ್