Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಲಸಿಕೆ- ಆರೋಗ್ಯ ಸಚಿವ ಸುಧಾಕರ್‌ ಏನಂದರೂ..?

ಮಕ್ಕಳಿಗೆ ಲಸಿಕೆ- ಆರೋಗ್ಯ ಸಚಿವ ಸುಧಾಕರ್‌ ಏನಂದರೂ..?
bangalore , ಸೋಮವಾರ, 27 ಡಿಸೆಂಬರ್ 2021 (20:03 IST)
ಬೆಂಗಳೂರು: ಪ್ರಧಾನಿ ಮೋದಿ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದಾಗಿ ಘೋಷಿಸಿದ ಬಳಿಕ ರಾಜ್ಯದಲ್ಲೂ ಲಸಿಕೀಕರಣದ ಕಾರ್ಯ ಚುರುಕುಗೊಂಡಿವೆ.  ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಂದ ಕೂಡಲೇ ಮಕ್ಕಳಿಗೆ ಮೊದಲನೇ ಹಂತದ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ತಿಳಿಸಿದರು.
ಕೋವಿಡ್ ಲಸಿಕೆ ಉಳಿದಿರುವ ಶೇ. 3ರಷ್ಟು ಮೊದಲ ಡೋಸ್ ಅನ್ನು ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ. ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಲಸಿಕೆ ನೀಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡನೇ ಡೋಸ್ ತೆಗೆದುಕೊಳ್ಳಲು ಇನ್ನೂ 45ಲಕ್ಷ ಜನರು ಬಾಕಿ ಇದ್ದಾರೆ. ಜನವರಿ 3ರಿಂದ ಕರ್ನಾಟಕದಲ್ಲಿ ಇರುವ 43 ಲಕ್ಷ 15ರಿಂದ 18 ವರ್ಷದ ಮಕ್ಕಳಿಗೆ ಮೊದಲನೇ ಹಂತದ ಲಸಿಕೆ ವಿತರಿಸಲಾಗುತ್ತದೆ. ಇದರ ಕುರಿತು ಕೇಂದ್ರದಿಂದ ಮಾರ್ಗಸೂಚಿ ಬಂದ ತಕ್ಷಣ ಕರ್ನಾಟಕದಲ್ಲಿ ಚಾಲನೆ ನೀಡಲಾಗುತ್ತದೆ. ಜನವರಿ 10ರಿಂದ ಮೂರನೇ ಹಂತದ ಲಸಿಕಾ ವಿತರಣೆ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲೆಗಳಲ್ಲಿಯೂ ಚಾಲನೆ ಕೊಡಲಾಗುತ್ತದೆ. ಪ್ರಾರಂಭಿಕವಾಗಿ 60 ವಯಸ್ಸಿನ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಡಾ. ಸುಧಾಕರ್ ವಿವರಿಸಿದರು.
ಒಮಿಕ್ರಾನ್ ಬಹಳ ವೇಗವಾಗಿ ಹರಡುತ್ತದೆ. ಭಾರತದಲ್ಲಿ 400 ಪ್ರಕರಣಗಳಿದ್ದರೆ, ಕರ್ನಾಟಕದಲ್ಲಿ 38 ಪ್ರಕರಣಗಳು ವರದಿ ಆಗಿವೆ. ಹಿನ್ನೆಲೆಯಲ್ಲಿ 4000 ಐಸಿಯು ಬೆಡ್ ಗಳನ್ನು ಸಿದ್ಧಗೊಳಿಸಲಾಗಿದೆ. ಆಕ್ಸಿಜನ್ ಸಹಿತ ಬೆಡ್ ಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಹೊಸ ವರ್ಷದ ಸಮಾರಂಭ, ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಎಲ್ಲ ಪಬ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸಾಮರ್ಥ್ಯದ ಶೇ. 50ರಷ್ಟು ಮಾತ್ರ ಭರ್ತಿ ಮಾಡಲು ಅನುಮತಿಸಲಾಗಿದೆ. ರಾತ್ರಿ 10ಗಂಟೆ ನಂತರ ಬಂದ್ ಮಾಡಲು ಆದೇಶಿಸಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

“ಶಾಲೆಗಳ ಬಲವರ್ಧನೆಗೆ ಸಮುದಾಯದ ಸಹಕಾರ ಅಗತ್ಯ”