Webdunia - Bharat's app for daily news and videos

Install App

ಆರೋಗ್ಯಕರ ಜೀವನಕ್ಕೆ ಪೂರಕ!

Webdunia
ಶುಕ್ರವಾರ, 29 ಅಕ್ಟೋಬರ್ 2021 (09:09 IST)
ಸ್ವಾಧವಸ್ಟೇ ಅಲ್ಲ ಆರೋಗ್ಯಕರ ಜೀವನಕ್ಕೆ ಪ್ರಸ್ತುತ ಸೂಕ್ತವಾಗಿದೆ.  ಚಹಾ ಆಯ್ಕೆಗೆ ಪೈಪೋಟಿ ನೀಡುವ ಗ್ರೀನ್ ಟೀ ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿದೆ.
ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುತ್ತದೆ.
ಗ್ರೀನ್ ಟೀ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುತ್ತದೆ.
ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್ಗಳು (ಉತ್ಕರ್ಷಣ ನಿರೋಧಕ) ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರೀನ್ ಟೀ ನೋಡಲು ಮಾತ್ರ ಹಸಿರಾಗಿರದೆ ದೇಹವನ್ನೂ ಹಸಿರುಗೊಳಿಸಲು ಸಮೃದ್ಧವಾಗಿದೆ.
ಇದರಲ್ಲಿರುವ ಫ್ಲೇವನಾಯ್ಡ್, ಕ್ಯಾಟೆಚಿನ್ ಎಂಬ ಪಾಲಿಫಿನಾಲ್ಗಳು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ಮಾಡುತ್ತವೆ. ಇದು ಜೀವಕೋಶಗಳ ಸವೆತ ತಡೆಯುವುದು ಮತ್ತು ಹೊರಪದರಗಳಿಗೆ ಬಲಿಷ್ಟತೆಯನ್ನು ನೀಡುವ ಕಾರಣ ಅತ್ಯಂತ ತಳಮಟ್ಟದಿಂದ ಆರೋಗ್ಯವನ್ನು ವೃದ್ಧಿಸುತ್ತದೆ.
ಮನಸ್ಸಿಗೆ ನವಚೈತನ್ಯ ತುಂಬುತ್ತದೆ
ಗ್ರೀನ್ ಟೀಯಲ್ಲಿ ಶೇ.2-4 ಕೆಫೀನ್ ಅಂಶ ಇದ್ದು, ಇದು ನಮ್ಮ ಮನಸ್ಸನ್ನು ಜಾಗರೂಕತೆಯಿಂದ ಇರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಜೊತೆಗೆ ಮೆದುಳಿನ ಕಾರ್ಯಚಟುವಟಿಕೆಯನ್ನು ಸುಧಾರಿಸಲು ಸಹ ಕೆಲಸ ಮಾಡುತ್ತದೆ, ಸ್ವಲ್ಪ ಕೆಲಸ ಮಾಡಿದ ನಂತರ ಮಾನಸಿಕವಾಗಿ ಸುಸ್ತಾಗುತ್ತಿದ್ದರೆ ಈ ಗ್ರೀನ್ ಟೀ ಆಯಾಸವನ್ನು ದೂರಾಗಿಸುತ್ತದೆ.
ಗ್ರೀನ್ ಟೀಯಲ್ಲಿ ಥೈನೈನ್ ಅಂಶವಿದೆ, ಇದರಲ್ಲಿ ಅಮೈನೋ ಆಮ್ಲಗಳಿವೆ. ಅಮೈನೊ ಆಮ್ಲಗಳು ದೇಹದಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುತ್ತವೆ ಮತ್ತು ನಿಮಗೆ ಆಯಾಸವಾಗುವುದಿಲ್ಲ. ಇದು ಯಾವಾಗಲೂ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.
ಮೆದುಳಿಗೆ ಚುರುಕುತನದ ಪ್ರಭಾವ ಉಂಟಾಗುವುದರಿಂದ ಚಟುವಟಿಕೆಯಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲು ಸಹಾಯವಾಗುತ್ತದೆ.
ತ್ವಚೆಯ ಆರೋಗ್ಯ
ನಮ್ಮ ತ್ವಚೆಯ ಕಾಂತಿ ನಮ್ಮ ಸೌಂದರ್ಯವನ್ನು ಬಿಂಬಿಸುತ್ತದೆ. ನಮ್ಮ ದೇಹದ ಚರ್ಮ ಆರೋಗ್ಯ ಭರಿತವಾದರೆ ಹಲವಾರು ಚರ್ಮ ವ್ಯಾಧಿಗಳಿಂದ ನಾವು ದೂರ ಉಳಿಯಬಹುದು. ನಿರ್ಜಲೀಕರಣದ ಸಮಸ್ಯೆ ಹೊಂದಿಲ್ಲದಿದ್ದರೆ ನಮ್ಮ ಚರ್ಮ ಆರೋಗ್ಯದಿಂದಲೇ ಕೂಡಿರುತ್ತದೆ.
ದೇಹದಲ್ಲಿನ ಕೊಬ್ಬು ನಿವಾರಣೆ
ಗ್ರೀನ್ ಟೀನಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ ಕ್ಯಾಟೆಚಿನ್ಸ್) ಎಂಬ ಕೆಲವು ರೀತಿಯ ಫ್ಲೇವನಾಯ್ಡ್ಗಳಿವೆ. ಇದು ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಕೊಬ್ಬಿನ ಉತ್ಕರ್ಷಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬು ಹೆಚ್ಚಾಗಿ ಮಧುಮೇಹಕ್ಕೆ ಕಾರಣವಾಗುತ್ತದೆ. ಇಜಿಸಿಜಿ ಕ್ಯಾಟೆಚಿನ್ಸ್ ಗ್ಲೂಕೋಸ್ ವಿರುದ್ಧ ಸಹಿಷ್ಣುತೆಯನ್ನು ಸುಧಾರಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಾಗದೆ ಏರುತ್ತಿದ್ದರೆ ಮಧುಮೇಹದ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಗ್ರೀನ್ ಟೀ ಸೇವಿಸುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುವ ಅಡ್ರಿನಾಲಿನ್ ಹಾರ್ಮೋನ್ ಉತ್ಪಾದನೆಯು ಕಡಿಮೆಯಾಗುತ್ತದೆ.
ಜೀರ್ಣ ಕ್ರಿಯೆ
ಗ್ರೀನ್ ಟೀ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಒತ್ತಡ, ಖಿನ್ನತೆ ಅಥವಾ ಆತಂಕಕ್ಕೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳಿಂದ ನಿಮ್ಮನ್ನು ತಡೆಯುತ್ತದೆ. ಮಧುಮೇಹ ಹೊಂದಿರುವವರಿಗಂತೂ ಈ ಗ್ರೀನ್ ಟೀ ಪರಿಣಾಮಕಾರಿಯಾಗಿದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments