Select Your Language

Notifications

webdunia
webdunia
webdunia
webdunia

ಮದುವೆ ಸಮಯದಲ್ಲಿ ಬೆಳ್ಳಗೆ ಕಾಣಬೇಕಾ? ಈ ಸಲಹೆಗಳನ್ನು ಪಾಲಿಸಿ

ಮದುವೆ ಸಮಯದಲ್ಲಿ ಬೆಳ್ಳಗೆ ಕಾಣಬೇಕಾ? ಈ ಸಲಹೆಗಳನ್ನು ಪಾಲಿಸಿ
ಬೆಂಗಳೂರು , ಗುರುವಾರ, 28 ಅಕ್ಟೋಬರ್ 2021 (12:38 IST)
ಪ್ರಸ್ತುತ ದಿನಗಳಲ್ಲಂತೂ ಮದುವೆಗಳು ಕಾಲಕ್ರಮೇಣ ತನ್ನ ಚಾಪನ್ನೇ ವಿಭಿನ್ನವಾಗಿಸಿವೆ. ಮದುವೆ ಎಂದರೆ ಪ್ರತಿಯೊಬ್ಬರ ಕನಸು ಕೂಡ ಹಾಗಾಗಿ ಆ ಕ್ಷಣಗಳನ್ನು ಸಾಕಷ್ಟು ವರ್ಷಗಳು ಮೆಲುಕು ಹಾಕಲೆಂದೇ ಪ್ರೀ ವೆಡ್ಡಿಂಗ್ ಪೋಟೋ ಶೋಟ್ ಟ್ರೆಡ್ ಆಗಿದೆ.
ಆ ಸುಂದರ ಕ್ಷಣಗಳು ಸುಂದರವಾಗಿರಲು ಎಲ್ಲರೂ ಇಷ್ಟ ಪಡುತ್ತಾರೆ. ಈ ರೀತಿಯ ಆಸೆಗಳು ನಿಮಗೂ ಇದ್ದಲ್ಲಿ ಕೆಳಗಿನಂತೆ ಪಾಲಿಸಿ.
ಮದುವೆ ಅನ್ನುವುದು ಜೀವನದ ಅತೀ ಸುಂದರ ಹಾಗೂ ಖುಷಿಯ ಕ್ಷಣ. ಇದು ಜೀವಮಾನವಿಡಿ ನೆನಪಿಡುವಂತಹ ಕ್ಷಣ. ಹೀಗಾಗಿ ಅವರು ತಮಗೆ ಬೇಕಾಗಿರುವಂತಹ ಬಟ್ಟೆಬರೆ, ಆಭರಣ ಇತ್ಯಾದಿಗಳನ್ನು ಖರೀದಿ ಮಾಡುವ ಜತೆಗೆ ಕೂದಲು ಹಾಗೂ ತ್ವಚೆಯ ಆರೈಕೆಗೂ ಗಮನ ನೀಡುವರು.
 ಧಾನ್ಯಗಳು
ಇಡೀ ಧಾನ್ಯಗಳಲ್ಲಿ ಅಧಿಕ ಪ್ರಮಾಣದ ನಾರಿನಾಂಶವಿದ್ದು, ಇದು ಕರುಳಿನ ಕ್ರಿಯೆ ಸರಾಗವಾಗಿಡುವುದು ಮತ್ತು ಮಲಬದ್ಧತೆ ತಡೆಯುವುದು. ಇದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಗೆ ಹೋಗಿ, ಚರ್ಮವು ಆರೋಗ್ಯದಿಂದ ಕೂಡಿರುವುದು.
ಬೀಜಗಳು
ಇದರಿಂದ ಬಯಕೆ ಕೂಡ ದೂರವಾಗುವುದು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕೊಬ್ಬಿನಾಮ್ಲ ಒಮೆಗಾ-3 ಇದೆ ಮತ್ತು ಇದು ತ್ವಚೆಯನ್ನು ನಯವಾಗಿಡುವುದು.
ನೀರಿನ ಪ್ರಮಾಣ ಹೆಚ್ಚಿಸಿ
ನೀರು ಚರ್ಮವನ್ನು ಮೊಶ್ಚಿರೈಸ್ ಮಾಡುವುದು ಮತ್ತು ಇದು ಹಸಿವನ್ನು ಕಡಿಮೆ ಮಾಡಿ, ಅತಿಯಾಗಿ ತಿನ್ನುವುದನ್ನು ತಡೆಯುವುದು. ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವ ಮೂಲಕ ಮೊಡವೆಗಳು ಮೂಡದಂತೆ ನೋಡಿಕೊಳ್ಳೂವುದು. ಹೀಗಾಗಿ ದೇಹವನ್ನು ಯಾವಾಗಲೂ ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯ. ಇದಕ್ಕಾಗಿ ಸೂಪ್, ಹಣ್ಣುಗಳನ್ನು ನಿತ್ಯವೂ ಸೇವಿಸಿ.
ಹಸಿ ತರಕಾರಿಗಳು
 ಹಸಿ ತರಕಾರಿಗಳಾಗಿರುವಂತಹ ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ ಮತ್ತು ನೆಲ್ಲಿಕಾಯಿಯನ್ನು ಸೇವನೆ ಮಾಡಿದರೆ ಅದರಿಂದ ಚರ್ಮಕ್ಕೆ ಪೋಷಣೆ ಸಿಗುವುದು ಮತ್ತು ಚರ್ಮವು ಗುಲಾಬಿ ಬಣ್ಣದಿಂದ ಕೂಡಿರುವುದು.
ಡಾರ್ಕ್ ಚಾಕಲೇಟ್(ಮಿತವಾಗಿ)
ಡಾರ್ಕ್ ಚಾಕಲೇಟ್ ನಲ್ಲಿ ಇರುವಂತಹ ಹೆಚ್ಚಿನ ಪ್ರಮಾಣವು ಕೋಕಾದಿಂದ ಕೂಡಿರುವುದು. ಇದು ಒಂದು ಆಂಟಿಆಕ್ಸಿಡೆಂಟ್ ಮತ್ತು ಇದರಲ್ಲಿನ ಫ್ಲಾವನಾಯ್ಡ್ ಅಂಶವು ಒತ್ತಡದ ಹಾರ್ಮೋನ್ ನ್ನು ನಿವಾರಣೆ ಮಾಡಿ.
ಚೀಯಾ ಬೀಜಗಳು ತ್ವಚೆಗೆ ಅದ್ಭುತವಾಗಿ ಕೆಲಸ ಮಾಡುವುದು. ಇವುಗಳಲ್ಲಿ ಕೂಡ ಒಮೆಗಾ-3 ಕೊಬ್ಬಿನಾಮ್ಲವು ಅದ್ಭುತ ಪ್ರಮಾಣದಲ್ಲಿದೆ ಮತ್ತು ಇದು ಅಂಗಾಂಶಗಳಿಗೆ ಪೋಷಣೆ ನೀಡುವುದು ಮತ್ತು ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದು.
ಪಪ್ಪಾಯಿ
ಎರಡು ಪಿಂಗಾಣಿಯಷ್ಟು ಪಪ್ಪಾಯಿಯನ್ನು ವಿವಾಹದ ತನಕ ಪ್ರತಿನಿತ್ಯವೂ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ಉತ್ತಮ ಪ್ರಮಾಣದ ಕಿಣ್ವ ಪಪೈನ್ ಇದ್ದು, ವೇಗವಾಗಿ ಜೀರ್ಣವಾಗಲು ಸಹಕಾರಿ ಮತ್ತು ಚಯಾಪಚಯವನ್ನು ಇದು ಸುಧಾರಣೆ ಮಾಡುವುದು.
ಮೊಸರು
ಮೊಸರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಉತ್ತಮ ಪ್ರಮಾಣದಲ್ಲಿದೆ. ಇದು ಹೊಟ್ಟೆಯ ಆರೋಗ್ಯಕ್ಕೆ ಅದ್ಭುತವಾಗಿ ಕೆಲಸ ಮಾಡುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ. ಬ್ಯಾಕ್ಟೀರಿಯಾವು ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ನೆನೆಸಿಟ್ಟ ಬಾದಾಮಿ
ದಿನಾ ನೆನೆಸಿಟ್ಟ ಬಾದಾಮಿಯನ್ನು ಸೇವನೆ ಮಾಡಿದರೆ ಅದರಿಂದ ದೇಹದ ಒಳಗಿನ ಅಂಗಾಂಗಗಳು ಶುಚಿಯಾಗುವುದು ಮತ್ತು ಹಲವಾರು ರೀತಿಯ ಚರ್ಮದ ಸಮಸ್ಯೆಗಳಾಗಿರುವಂತಹ ಮೊಡವೆ, ಬೊಕ್ಕೆ, ವೈಡ್ ಹೆಡ್ ಇತ್ಯಾದಿಗಳನ್ನು ಇದು ನಿವಾರಿಸುವುದು.


Share this Story:

Follow Webdunia kannada

ಮುಂದಿನ ಸುದ್ದಿ

ಈ ರುಚಿಕರ ತಿನಿಸಿನೊಂದಿಗೆ ದೀಪಾವಳಿಯನ್ನು ವಿಶೇಷವಾಗಿಸಿ