Select Your Language

Notifications

webdunia
webdunia
webdunia
webdunia

ಉತ್ತಮ ಆರೋಗ್ಯಕ್ಕೆ ಅಡುಗೆ ಮನೆ ಶುಚಿತ್ವ ಎಷ್ಟು ಮುಖ್ಯ?

ಉತ್ತಮ ಆರೋಗ್ಯಕ್ಕೆ ಅಡುಗೆ ಮನೆ ಶುಚಿತ್ವ ಎಷ್ಟು ಮುಖ್ಯ?
ಬೆಂಗಳೂರು , ಗುರುವಾರ, 28 ಅಕ್ಟೋಬರ್ 2021 (08:39 IST)
ಅಡುಗೆ ಮನೆಯು ಶುಚಿಯಾಗಿದ್ದ ವೇಳೆ ಅಲ್ಲಿ ತಯಾರಾಗುವಂತಹ ಆಹಾರವು ಆರೋಗ್ಯಕಾರಿಯಾಗಿ ಇರುವುದು.
ಹೀಗಾಗಿ ಅಡುಗೆ ಮನೆಯಲ್ಲಿ ಬಳಸುವಂತಹ ಪ್ರತಿಯೊಂದು ಪಾತ್ರೆಗಳು, ಸಾಮಗ್ರಿಗಳು ಹಾಗೂ ಅಡುಗೆ ಮನೆಯ ನೆಲ, ಗೋಡೆ ಕೂಡ ಶುಚಿಯಾಗಿ ಇರಬೇಕು.
ನೀರನ್ನು ಬಿಸಿ ಮಾಡಿ ಕುಡಿದರೆ, ಅದರಲ್ಲಿ ಇರುವಂತಹ ಕೀಟಾಣುಗಳು ನಾಶವಾಗುವುದು. ಆದರೆ ಕುದಿಯುವ ನೀರಿಗೆ ಸಾಮಾನ್ಯ ನೀರು ಹಾಕಿದರೆ ಅದರಿಂದ ಕೀಟಾಣುಗಳು ಹೆಚ್ಚಾಗುವುದು.
ಇದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಹೀಗಾಗಿ ಅಡುಗೆ ಮನೆಯಲ್ಲಿ ಕೈಗೊಳ್ಳಬೇಕಾದ ಕೆಲವು ಕ್ರಮಗಳು ಮತ್ತು ಸುರಕ್ಷತೆಯ ಸಲಹೆಗಳನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲಿದ್ದೇವೆ. ಅಡುಗೆ ಮನೆಗೆ ಆರೋಗ್ಯಕಾರಿ ಸಲಹೆಗಳು
ಎಣ್ಣೆಯನ್ನು ಸರಿಯಾಗಿ ಆಯ್ಕೆ ಮಾಡಿ
webdunia

•ಭಾರತೀಯರು ಹೆಚ್ಚಿನ ಎಲ್ಲಾ ಅಡುಗೆಗಳಿಗೆ ಎಣ್ಣೆ ಬಳಕೆ ಮಾಡಿಯೇ ಮಾಡುವರು. ಇದರಿಂದ ಎಣ್ಣೆಯು ಆರೋಗ್ಯಕಾರಿಯಾಗಿ ಇರಬೇಕು ಮತ್ತು ಅದು ಒಳ್ಳೆಯ ಗುಣಮಟ್ಟದ್ದಾಗಿರಬೇಕು.
•ಅನಾರೋಗ್ಯಕಾರಿ ಎಣ್ಣೆಯಿಂದಾಗಿ ಅಪಧಮನಿ ಕಾಯಿಲೆ, ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಬೊಜ್ಜು ಕಾಡಬಹುದು. ಇದರಿಂದ ಸರಿಯಾದ ಗುಣಮಟ್ಟದ ಎಣ್ಣೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಮಿತವಾಗಿ ಬಳಕೆ ಮಾಡಬೇಕು.
ಆಹಾರವನ್ನು ಮುಚ್ಚಿಡಿ
webdunia

•ಫ್ರಿಡ್ಜ್ ಎನ್ನುವುದು ಯಾವಾಗಲೂ ಆಹಾರಗಳನ್ನು ಸಂಗ್ರಹಿಸುವಂತಹ ಸ್ಥಳವಾಗಿರುವುದು. ಅಳಿದುಳಿದ ಆಹಾರವನ್ನು ಸರಿಯಾದ ರೀತಿಯಲ್ಲಿ ಮುಚ್ಚಿಟ್ಟುಕೊಂಡು ಅದನ್ನು ಡಬ್ಬದಲ್ಲಿ ಹಾಕಿಟ್ಟು ಒಳಗೆ ಇಡಬೇಕು. ಹಣ್ಣುಗಳು, ತರಕಾರಿ ಮತ್ತು ಮಾಂಸವನ್ನು ಪ್ರತ್ಯೇಕವಾಗಿ ಇಡಬೇಕು.
•ದೀರ್ಘ ಸಮಯದ ತನಕ ಫ್ರಿಡ್ಜ್ ನಲ್ಲಿ ಯಾವುದೇ ಆಹಾರವನ್ನು ಇಡಬಾರದು. ಅನಾರೋಗ್ಯಕಾರಿ ಆದ ರೀತಿಯಲ್ಲಿ ಆಹಾರಗಳನ್ನು ಶೇಖರಣೆ ಮಾಡಿಟ್ಟರೆ ಅದರಿಂದ ಕೀಟಾಣುಗಳು ನಿರ್ಮಾಣವಾಗುವುದು ಮತ್ತು ಇದರಿಂದ ಆರೋಗ್ಯಕ್ಕೆ ಹಾನಿ ಆಗಬಹುದು.
 ರುಚಿ ಪದಾರ್ಥಗಳ ಬಗ್ಗೆ ಎಚ್ಚರ
•ರುಚಿ ಹೆಚ್ಚಿಸಲು ಇಂದಿನ ದಿನಗಳಲ್ಲಿ ಎಲ್ಲಾ ರೀತಿಯ ಆಹಾರಗಳಿಗೆ ವಿಶೇಷವಾಗಿರುವಂತಹ ಹುಡಿಗಳು ಸಿಗುವುದು. ಆದರೆ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಬೇಕು.
•ಇವುಗಳಿಗೆ ಹೆಚ್ಚಿನ ಪ್ರಮಾಣದ ಉಪ್ಪು, ಸಕ್ಕರೆ ಮತ್ತು ಸಂರಕ್ಷಗಳನ್ನು ಹಾಕುವರು. ಮನೆಯಲ್ಲೇ ನೀವು ಇಂತಹ ರುಚಿಕಾರಕವನ್ನು ತಯಾರಿಸಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿಕಾರಗಳನ್ನು ಆದಷ್ಟು ಕಡೆಗಣಿಸಿ.
ಮಾಂಸವನ್ನು ಸರಿಯಾದ ರೀತಿ ಸಂಗ್ರಹಿಸಿ
webdunia

•ಮಾಂಸವನ್ನು ಯಾವ ರೀತಿ ಸಂಗ್ರಹಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಆರೋಗ್ಯವು ನಿಂತಿದೆ. ಫ್ರೀಜರ್ ನಲ್ಲಿ ಫ್ರೋಜರ್ ಮಾಂಸವನ್ನು ಮಾತ್ರ ಇಡಬಹುದು. ಆದರೆ ಇದು ಡೀಪ್ ಫ್ರೀಜರ್ ನಷ್ಟು ಬಲಿಷ್ಠವಲ್ಲ.
•ಹೀಗಾಗಿ ಅದನ್ನು ಆದಷ್ಟು ಬೇಗನೆ ಸೇವನೆ ಮಾಡಬೇಕು. ಮಾಂಸವನ್ನು ಡಬ್ಬದಲ್ಲಿ ಸರಿಯಾಗಿ ಹಾಕಿಟ್ಟು ಅದನ್ನು ಒಣ ಮತ್ತು ತಂಪಾದ ಜಾಗದಲ್ಲಿ ಇಡಬೇಕು. 7 ದಿನಗಳ ಒಳಗೆ ಇದನ್ನು ಸೇವನೆ ಮಾಡಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ಆರೋಗ್ಯಕ್ಕೆ ವ್ಯಾಯಾಮ ಎಷ್ಟು ಅವಶ್ಯಕ! ತಿಳಿಯಿರಿ