Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಹೊಸ ತಳಿಯ ಕೊವಿಡ್ ಪ್ರಕರಣ ಪತ್ತೆ!

ಕರ್ನಾಟಕದಲ್ಲಿ ಹೊಸ ತಳಿಯ  ಕೊವಿಡ್ ಪ್ರಕರಣ ಪತ್ತೆ!
ಬೆಂಗಳೂರು , ಗುರುವಾರ, 28 ಅಕ್ಟೋಬರ್ 2021 (08:00 IST)
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಹೊಸ ತಳಿಯ 2 ಕೊವಿಡ್ ಪ್ರಕರಣ ಪತ್ತೆ ಆಗಿದೆ. ಇಬ್ಬರಲ್ಲಿ AY 4.2  ತಳಿಯ ಕೊರೊನಾ ಸೋಂಕು ದೃಢವಾಗಿದೆ.
ಹೊಸ ತಳಿ ಬಗ್ಗೆ ಎಚ್ಚರವಹಿಸುವಂತೆ ಕೇಂದ್ರ ಈಗಾಗಲೇ ನಿರ್ದೇಶನ ನೀಡಿದೆ. ವಿದೇಶಗಳಲ್ಲಿ ಕಂಡು ಬರುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ಎವೈ 4.2 ರೂಪಾಂತರಿ ಕರ್ನಾಟಕದಲ್ಲಿ ಪತ್ತೆಯಾಗಿತ್ತು. ಈ ಮೊದಲು, ಬೆಂಗಳೂರಿನ ಮೂವರು ಮತ್ತು ರಾಜ್ಯದ ಇತರೆಡೆಯ ನಾಲ್ವರಲ್ಲಿ ಈ ರೂಪಾಂತರಿ ಪತ್ತೆಯಾಗಿರುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ದೃಢಪಡಿಸಿದ್ದರು. ಹೊಸ ರೂಪಾಂತರಿಯಿಂದ ರಾಜ್ಯದಲ್ಲಿ ಈವರೆಗೆ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದರು.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣದಲ್ಲಿವೆ. ವಿದೇಶಗಳಿಂದ ಬರುವ ಪ್ರವಾಸಿಗರು ಕನಿಷ್ಠ 72 ಗಂಟೆ ಮೊದಲು ಮಾಡಿಸಿಕೊಂಡಿರುವ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರದಿಗಳನ್ನು ಏರ್ ಸುವಿಧಾ ಪೋರ್ಟಲ್ನಲ್ಲಿ ಈ ವರದಿಗಳನ್ನು ಅಪ್ಲೋಡ್ ಮಾಡಬೇಕು. ಇಷ್ಟು ಬಿಟ್ಟರೆ ರಾಜ್ಯದಲ್ಲಿ ಕ್ವಾರಂಟೈನ್ನಂಥ ಕ್ರಮಗಳನ್ನು ಜಾರಿಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮನುಷ್ಯ ಅರಿವು ಬುದ್ದಿವಂತ ಉಳ್ಳವ: ಸಂಸದ ತೇಜಸ್ವಿ ಸೂರ್ಯ