Select Your Language

Notifications

webdunia
webdunia
webdunia
webdunia

ಅರೆ ತಲೆನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಅರೆ ತಲೆನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ
ಬೆಂಗಳೂರು , ಶನಿವಾರ, 4 ಆಗಸ್ಟ್ 2018 (08:02 IST)
ಬೆಂಗಳೂರು: ತಲೆನೋವು ಬಂದಾಗ ಏನೂ ಕೂಡ ಬೇಡ ಅನಿಸುವುದು ಸಹಜ. ಅದರಲ್ಲೂ ಅರೆ ತಲೆನೋವು ಕಾಣಿಸಿಕೊಂಡರೆ ಮತ್ತಷ್ಟೂ ಹಿಂಸೆ ಕಾಡುತ್ತೆ. ಮನೆಯಲ್ಲಿ ಇದೆ ಇದಕ್ಕೆ ಸುಲಭವಾದ ಪರಿಹಾರ.


*ಹಿಪ್ಪಲಿ ಮತ್ತು ಬಜೆಯ ಪುಡಿಯನ್ನು ಬಿಸಿ ಹಾಲು ಅಥವಾ ಬಿಸಿ ನೀರಿನಲ್ಲಿ ದಿನಕ್ಕೆ 2 ಬಾರಿ ಸೇವಿಸಿದರೆ ಅರೆತೆನೋವು ಗುಣವಾಗುತ್ತದೆ.

*ಒಂದು ವಾರ ನಿರಂತರವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಜತೆ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ.

*ಕುದಿಯುವ ನೀರಿನಲ್ಲಿ ತಾಜಾ ಶುಂಠಿ ಅಥವಾ ಒಣ ಶುಂಠಿ ಪುಡಿಯನ್ನು ಸೇರಿಸಿ ಹಬೆ ತೆಗೆದುಕೊಳ್ಳಿ.

*ನಿಂಬೆರಸವನ್ನು ಹಣೆಗೆ ಹಚ್ಚಿ.

*ಬಿಸಿ ನೀರು ತುಂಬಿದ ಒಂದು ಬಕೆಟ್‌ನಲ್ಲಿ ನಿಮ್ಮ ಕಾಲುಗಳನ್ನು 15 ನಿಮಿಷಗಳ ಕಾಲ ಇಳಿಬಿಡಬೇಕು. ಎರಡು ಮೂರು ವಾರಗಳ ಕಾಲ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ.

*ಬಿಸಿ ನೀರಿನಲ್ಲಿ ನೀಲಗಿರಿ ತೈಲದ 10 ಹನಿಗಳನ್ನು ಹಾಕಿ ಹಬೆ ತೆಗೆದುಕೊಳ್ಳಿ.

*ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್‌ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತವೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸುಖ ಹಾಳು ಮಾಡುವ ಆ ವಿಚಾರಗಳು ಯಾವುವು?