Select Your Language

Notifications

webdunia
webdunia
webdunia
webdunia

ಕಾಲಿನ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

ಕಾಲಿನ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 12 ಜುಲೈ 2018 (14:51 IST)
ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಮಹಿಳೆಯರು ತಮ್ಮ ಕೂದಲು, ಮುಖ, ಕೈಗಳ ಸೌಂದರ್ಯಕ್ಕಷ್ಟೇ ಹೆಚ್ಚು ನಿಗಾವಹಿಸುತ್ತಾರೆ, ಪಾದಗಳ ಸೌಂದರ್ಯದತ್ತ ಗಮನಹರಿಸುವುದು ಕಡಿಮೆ. ಪಾದದ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಹೊತ್ತು ವ್ಯಯ ಮಾಡಲೇಬೇಕು.
- ಕಿತ್ತಳೆ ಸಿಪ್ಪೆಯ ಪೌಡರ್ ಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಸೇರಿಸಿ ಮತ್ತು ಸಕ್ಕರೆ ಸೇರಿಸಿ ದಪ್ಪ ಹಿಟ್ಟಿನಂತೆ ಮಾಡಿಕೊಂಡು ಹಚ್ಚಿ 20 ನಿಮಿಷದ ನಂತರ ತೊಳೆಯಿರಿ.
 
- ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪೌಡರ್ ಮಾಡಿ, ಸ್ವಲ್ಪ ಮೊಸರು ಸೇರಿಸಿ ಕೈ ಮತ್ತು ಕಾಲುಗಳಿಗೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.
 
- ಕಾಲಿನ ಹಿಮ್ಮಡಿ ಒಡೆದು ಧೂಳು ಸೇರಿದಂತೆ ಮಣ್ಣು ಸೇರಿಕೊಂಡು ಕಪ್ಪಗಾಗಿ ಅಸಹ್ಯ ಎನಿಸಿದರೆ ಅಡುಗೆ ಸೋಡಾದಿಂದ ತೊಳೆಯಿರಿ.
 
- ಸ್ವಲ್ಪ ಹಾಲನ್ನು ಬಳಸಿ ಪಾದವನ್ನು ಮಸಾಜ್ ಮಾಡಿ, ನಂತರ ಹಾಲು ಹಾಗೂ ಬೇಕಿಂಗ್ ಪೌಡರ್ ಸೇರಿಸಿ ನಿಮ್ಮ ಪಾದಕ್ಕೆ ಹಚ್ಚಿ 10 ನಿಮಿಷಗಳ ಬಳಿಕ ಕಾಲಿನ ಡೆಡ್ ಸ್ಕಿನ್‌ಗಳನ್ನು ತೆಗೆಯಿರಿ. ಹೀಗೆ ಮಾಡುವುದರಿಂದ ಒಡೆದ ಪಾದಗಳಿಂದ ಮುಕ್ತಿಪಡೆಯಬಹುದು. 
 
- ವಾರಕ್ಕೊಮ್ಮೆ ಬಿಸಿನೀರಿಗೆ ಕೊಂಚ ಉಪ್ಪು ಸೇರಿಸಿ ಅದರಲ್ಲಿ ಪಾದಗಳನ್ನು ಮುಳುಗಿಸಿಡುವುದರಿಂದ ರಿಲ್ಯಾಕ್ಸ್ ಆಗುತ್ತದೆ.
 
- ಗ್ಲಿಸರಿನ್ ಮತ್ತು ಜೇನನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ರಾತ್ರಿ ಅದನ್ನು ಕಾಲಿನ ಒಡೆದ ಹಿಮ್ಮಡಿಗೆ ಹಚ್ಚಿ ಬೆಳಗ್ಗೆ ತೊಳೆದರೆ, ಹಿಮ್ಮಡಿ ನುಣುಪಾಗುತ್ತದೆ.
 
- ನಿಂಬೆಹಣ್ಣಿ ಹೋಳನ್ನು ಆನಿಯಿದ್ದ ಸ್ಥಕ್ಕೆ ಕಟ್ಟಿ ಇಡೀ ರಾತ್ರಿ ಇರಲು ಬಿಡಿ. ಇದು ಆನಿ ಒಣಗುವಂತೆ ಮಾಡುತ್ತದೆ.
 
- ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಬಿರುಕು ಬಿಟ್ಟಿರುವ ಅಂಗಾಲಿಗೆ ಲೇಪಿಸಿದರೆ ಬಿರುಕು ಬಿಡುವುದು ನಿವಾರಣೆಯಾತ್ತದೆ.
 
- ಮಲಗುವ ಮೊದಲು ಈರುಳ್ಳಿಯ ಬಿಲ್ಲೆಗಳನ್ನು ಬಿರುಕು ಬಿಟ್ಟಿರುವ ಹಿಮ್ಮಡಿಯಲ್ಲಿ ಇಟ್ಟು, ಸಾಕ್ಸ್ ಹಾಕಿ ಮಲಗಿ, ಬೆಳಿಗ್ಗೆ ತೊಳೆದರೆ, ಹಿಮ್ಮಡಿ ನುಣುಪಾಗುತ್ತದೆ ಮತ್ತು ಬಿರುಕು ಕಡಿಮೆಯಾಗುತ್ತದೆ. 
 
- ಕಾಲಿನ ಕೂದಲು ತೆಗೆದ ಕೂಡಲೇ ರೋಸ್ ವಾಟರ್ ಬಳಸಿದರೆ ಕಾಲಿನ ಚರ್ಮದಲ್ಲಿ ದಿನವಿಡೀ ತೇವಾಂಶವನ್ನು ಕಾಪಾಡಿಕೊಳ್ಳುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರ ಸೌತೆಕಾಯಿಯ ಉಪಯೋಗಗಳು