Select Your Language

Notifications

webdunia
webdunia
webdunia
webdunia

ಕಾಫಿ ಬಳಸಿ ಸೌಂದರ್ಯ ಹೆಚ್ಚಿಸಿ

ಕಾಫಿ
ಕಾಫಿ ಕುಡಿಯಲು ಮಾತ್ರವಲ್ಲ, ತ್ವಚೆಯನ್ನು ಪೋಷಿಸಿ ಸೌಂದರ್ಯ ಹೆಚ್ಚಿಸಲೂ ಸಹಕಾರಿಯಾಗಿದೆ. ಕಾಫಿಯನ್ನು ಚರ್ಮದ ಆರೈಕೆಗೂ ಬಳಸಬಹುದಾಗಿದೆ. ಕಾಫಿಯಲ್ಲಿ ಇರುವಂತಹ ಕೆಫಿನ್ ಚರ್ಮದ ವಿನ್ಯಾಸ ಉತ್ತಮಪಡಿಸಿ, ಆರೋಗ್ಯವಾಗಿಡುತ್ತದೆ. ಇದರಿಂದ ಚರ್ಮದಲ್ಲಿನ ಕಪ್ಪು ಕಲೆ, ಮೊಡವೆ, ಬಿಸಿಲಿನಿಂದ ಆಗಿರುವ ಕಲೆಗಳು ನಿವಾರಣೆಯಾಗುತ್ತವೆ. 
* ಕೋಕೊ ಪೌಡರ್ ಜೊತೆ ಕಾಫಿ ಪುಡಿ, ಹಾಲು ಮತ್ತು ಸ್ವಲ್ಪ ಬೆಲ್ಲದ ರಸ ಸೇರಿಸಿ. ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ತ್ವಚೆಯಲ್ಲಿನ ಸುಕ್ಕನ್ನೂ ತಡೆಯುತ್ತದೆ ಮತ್ತು ಮುಖವನ್ನು ಶುದ್ಧವಿರುವಂತೆ ನೋಡಿಕೊಳ್ಳುತ್ತದೆ.
 
* ಹಳೆಯ ಕಾಫಿ ಬೀಜವನ್ನು ನುಣ್ಣಗೆ ಪುಡಿ ಮಾಡಿ ಟೀ ಟ್ರೀ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಚರ್ಮಕ್ಕೆ ನಿಯಮಿತವಾಗಿ ಹಚ್ಚಿಕೊಳ್ಳುವ ಮೂಲಕ ಚರ್ಮದ ಸೆಳೆತೆ ಹೆಚ್ಚುವುದು, ತನ್ಮೂಲಕ ಮುಪ್ಪು ದೂರಾಗುವುದು.
 
* 15 ದಿನಕ್ಕೊಮ್ಮೆ ಹಳೆಯ ಕಾಫಿ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ
 
* 1 ಚಮಚ ಕಾಫಿ ಪುಡಿಗೆ ಒಂದು ಚಮಚ ಮೊಸರು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ. ಒಣಗಿದ ನಂತರ ತೊಳೆದುಕೊಳ್ಳಿ. ಇದರಿಂದ ಮುಖದ ದೊಡ್ಡ ಪೋರ್ಸ್‌ ಕಡಿಮೆಯಾಗಿ, ಸ್ಕಿನ್‌ ಇಲ್ಯಾಸ್ಟಿಸಿಟಿ ಹೆಚ್ಚುತ್ತದೆ.
 
* ಕಾಫಿಯಲ್ಲಿರುವ ನೈಸರ್ಗಿಕ ಅಂಶಗಳು ಚರ್ಮದ ಮೇಲಿನ ಸತ್ತ ಚರ್ಮವನ್ನು(ಡೆಡ್ ಸೆಲ್ಸ್) ಹೊಗಲಾಡಿಸುತ್ತದೆ ಮತ್ತು ಚರ್ಮಕ್ಕೆ ಹೊಸ ಕಾಂತಿಯನ್ನು ನೀಡಿತ್ತದೆ.
 
* ಬೆಣ್ಣೆಯೊಂದಿಗೆ ಕಾಫಿ ಪುಡಿ ಬೆರೆಸಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಬೇಗನೆ ಚರ್ಮದ ಒಳಗೆ ಈ ಅಂಶ ಸೇರಿಕೊಂಡು ತ್ವಚೆಯನ್ನು ನುಣುಪಾಗುತ್ತದೆ.
 
* 3 ಚಮಚ ಕಾಫಿ ಪುಡಿಗೆ 1 ಚಮಚ ಹಾಲು ಸೇರಿಸಿ ಪೇಸ್ಟ್ ನಂತೆ ಮಾಡಿ ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಿ, ಒಣಗಿದ ನಂತರ ತಣ್ಣನೆ ನೀರಿನಿಂದ ತೊಳೆದುಕೊಂಡು ಮಾಯಿಶ್ಚರೈಸರ್ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಹೊಂದಬಹುದು.
 
* ಮೃದುವಾದ ಚರ್ಮವನ್ನು ಪಡೆಯಲು 1 ಚಮಚ ಕಾಫಿ ಪುಡಿಗೆ 1 ಚಮಚ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ. ಇದೊಂದು ಉತ್ತಮ ಸ್ಕ್ರಬ್‌ನಂತೆ ಕೆಲಸ ಮಾಡುತ್ತದೆ.
 
* ಕಾಫಿ ಸೇವನೆಯಿಂದ ರಕ್ತ ಚಲನೆ ಸರಾಗವಾಗಿ ಆಗುವುದರಿಂದ ಚರ್ಮ ಕೋಶಗಳು ಹೆಚ್ಚು ಕ್ರಿಯಾಶೀಲವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಳಿಂಬೆ ಹಣ್ಣಿನಿಂದ ಇಷ್ಟೆಲ್ಲಾ ಉಪಯೋಗಗಳಿವೆಯಂತೆ..!!