Select Your Language

Notifications

webdunia
webdunia
webdunia
webdunia

ಗ್ಲೋಯಿಂಗ್ ಸ್ಕಿನ್ ನಿಮ್ಮದಾಗಿಸಿಕೊಳ್ಳಲು ಹೀಗೆ ಮಾಡಿ

ಕಾಂತಿಯುತ ಚರ್ಮ
ಬೆಳ್ಳಗಿನ ಹೊಳೆಯುವ ತ್ವಚೆ ಯಾರಿಗೆ ತಾನೇ ಬೇಡ? ಆರೋಗ್ಯವಂತ ತ್ವಚೆಗಾಗಿ ಉತ್ತಮವಾದ ಆಹಾರ ಪದಾರ್ಥಗಳ ಸೇವನೆ ಮಾಡುವ ಜೊತೆಗೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಸುಂದರವಾಗಿಸಬಹುದು. ಸುಂದರ ಹಾಗೂ ಕಲೆಗಳಿಲ್ಲದ ಹೊಳೆಯುವ ಮುಖ ನಿಮ್ಮದಾಗಬೇಕಿದ್ದರೆ ಈ ವಿಧಾನಗಳನ್ನು ನೀವು ಅನುಸರಿಸಿ
- ನಿಂಬೆರಸ, ಟೊಮೆಟೊರಸ, ಅರಿಶಿಣ ಪುಡಿ, ಲೋಳೆಸರ ಹಾಕಿ ಮಿಕ್ಸ್ ಮಾಡಿ. ಅದನ್ನು ಮುಖ, ಕುತ್ತಿಗೆ , ಕೈಗಳಿಗೆ ಹಚ್ಚಿ 20 ನಿಮಿಷ ಬಿಡಿ, ನಂತರ ಹತ್ತಿಯ ಉಂಡೆಯನ್ನು ನೀರಿನಲ್ಲಿ ಅದ್ದಿ ಮುಖವನ್ನು ಒರೆಸಿ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. 
 
-  ಟೊಮ್ಯಾಟೋ ತಿರುಳನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮೊಡವೆ ಕಲೆಗಳು ಮಾಯವಾಗಿ, ಮುಖ ಕಾಂತಿಯುಕ್ತವಾಗುತ್ತದೆ.
 
- ಸ್ನಾನ ಮಾಡುವ ಮೊದಲು ನಿಂಬೆ ರಸ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಉಜ್ಜುವುದರಿಂದ ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ.
 
- ರಾತ್ರಿ ಮಲಗುವುದಕ್ಕೂ 10-15 ನಿಮಿಷಗಳ ಮುಂಚೆ ಕಚ್ಚಾ ಹಾಲನ್ನು ಮುಖಕ್ಕೆ ಲೇಪಿಸಿ, ಹಾಲು ಸಂಪೂರ್ಣ ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
 
- ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ನೊರೆಯಾಗುವ ತನಕ ಕಲಸಿ ಅದಕ್ಕೆ ಪಪ್ಪಾಯಿಯನ್ನು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಹಚ್ಚಿ 15-20 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಅದನ್ನು ತೊಳೆಯಿರಿ.
 
- ರಾತ್ರಿ ಮಲಗುವ ಮುಂಚೆ ಮುಖವನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಗ್ಲಿಸರಿನ್‌ ಲೇಪಿಸಿ ಮಲಗಿ.
 
- ಪ್ರತಿದಿನ ರಾತ್ರಿ ಮಲಗುವ ಮುಂಚೆ ಆಲೀವ್‌ ಆಯಿಲ್ ಮಸಾಜ್‌ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಬಹುದು.
 
- ಪಪ್ಪಾಯಿ ಹಣ್ಣಿನ ಸಿಪ್ಪೆ ತೆಗೆದು ಸ್ವಲ್ಪ ಪೇಸ್ಟ್ ನಂತೆ ಮಾಡಿಕೊಳ್ಳಿ. ಅದಕ್ಕೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ.
 
- ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ, 5 ನಿಮಿಷಗಳ ನಂತರ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ನಿಮ್ಮ ಚರ್ಮ ಬೆಳ್ಳಗಾಗುತ್ತದೆ ಮತ್ತು ಮುಖದ ಮೇಲೆ ಮೊಡವೆಗಳಿದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ.
 
- ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಲೇಪಿಸಿ, 10 ನಿಮಿಷಗಳ ನಂತರ ತಣ್ಣಗಿನ ನೀರುನಿಂದ ತೊಳೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಇಷ್ಟವಾಗುವ ಬಿಸ್ಕೇಟ್ ಕೇಕ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ