ಸೊಳ್ಳೆಗಳನ್ನು ಸಾಯಿಸಲು ಬಳಸುವ ಸೊಳ್ಳೆ ಬ್ಯಾಟ್ ಮಕ್ಕಳ ಜೀವಕ್ಕೆ ಅಪಾಯಕಾರಿ

Webdunia
ಬುಧವಾರ, 8 ಮೇ 2019 (09:24 IST)
ಬೆಂಗಳೂರು : ಇತ್ತೀಚೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿರುವುದರಿಂದ ಸೊಳ್ಳೆ ಹೋಗಲಾಡಿಸಲು ಬ್ಯಾಟ್ ಗಳನ್ನು ಬಳಸುತ್ತಾರೆ. ಆದರೆ ಸೊಳ್ಳೆ ಬ್ಯಾಟ್ ಗಳು ತುಂಬಾ ಅಪಾಯಕಾರಿ ಎಂದು ಸಂಶೋಧನೆಯೊಂದು ತಿಳಿಸಿದೆ.




ಹೈದರಾಬಾದ್ ನ ಸೆಂಟರ್ ಫಾರ್ ಮಟೀರಿಯಲ್ಸ್ ಫಾರ್ ಇಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಚೀನಾ ನಿರ್ಮಿತ ಅಗ್ಗದ ಸೊಳ್ಳೆ ಬ್ಯಾಟುಗಳಲ್ಲಿ ಮಿತಿ ಮೀರಿದ ಸೀಸದ ಅಂಶವು ಪರಿಸರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.


ಹಾಗೇ ಯೂರೋಪ್ ಒಕ್ಕೂಟದ ತಜ್ಞರು ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಸೊಳ್ಳೆ ಬ್ಯಾಟ್ ಗಳಲ್ಲಿ ಸೀಸದ ಅಂಶವು ಗರಿಷ್ಠ 1000 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಇದರ ಅಂಶ 3000 ಪಿಪಿಎಂನಿಂದ 82 ಸಾವಿರ ಪಿಪಿಎಂವರೆಗೂ ಇದೆ ಎಂದು ತಿಳಿದುಬಂದಿದೆ. ಅಲ್ಲದೇ 2016ರಲ್ಲಿ ಚೀನಾದಿಂದ 2 ಲಕ್ಷ ಸೊಳ್ಳೆ ಬ್ಯಾಟ್ ಗಳನ್ನು ಭಾರತ ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments