Publish Date: Tue, 01 Oct 2019 (08:59 IST)
Updated Date: Tue, 01 Oct 2019 (09:03 IST)
ಬೆಂಗಳೂರು: ಸಣ್ಣ ವಯಸ್ಸಿನಲ್ಲಿ ಮದುವೆಯಾದರೆ ಅಥವಾ ಲೈಂಗಿಕವಾಗಿ ಹೆಚ್ಚು ಜ್ಞಾನವಿಲ್ಲದೇ ಇದ್ದಾಗ ಮದುವೆಯಾದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕೊರತೆ ಕಾಡುವುದು ಸಹಜ.
ಲೈಂಗಿಕ ಜೀವನದ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದ ಸಮಯದಲ್ಲಿ ಗಂಡನೊಡನೆ ದೈಹಿಕ ಸಂಬಂಧಕ್ಕೆ ಮನಸ್ಸು ಒಪ್ಪುವುದಿಲ್ಲ. ಈ ಸಂದರ್ಭದಲ್ಲಿ ಗಂಡನ ಲೈಂಗಿಕ ಬಯಕೆಗಳು ಪೂರ್ತಿಯಾಗದೇ ಇಬ್ಬರ ನಡುವೆ ಮುನಿಸು, ವೈಮನಸ್ಯ ಸಾಮಾನ್ಯ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವಾಗ ಹೆಣ್ಣು ಮಕ್ಕಳಿಗೆ ಲೈಂಗಿಕ ಜೀವನದ ಬಗ್ಗೆ ತಿಳುವಳಿಕೆ ನೀಡಬೇಕಾದುದು ಅಗತ್ಯ. ಆರಂಭದಲ್ಲಿ ಹೇಗೆ ಪರಸ್ಪರ ಪ್ರೀತಿಯಿಂದ ನಡೆದುಕೊಳ್ಳುತ್ತೇವೆ ಎನ್ನುವುದು ಅವರಿಬ್ಬರ ಮುಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಮರೆಯಬಾರದು.