Publish Date: Mon, 30 Sep 2019 (08:59 IST)
Updated Date: Mon, 30 Sep 2019 (09:00 IST)
ಬೆಂಗಳೂರು: ಕೆಲವೊಮ್ಮೆ ಯಾವುದೋ ಬಂಧನಕ್ಕೆ ಕಟ್ಟು ಬಿದ್ದು ಲೈಂಗಿಕ ಕಿರುಕುಳವನ್ನು ಸಹಿಸಿಕೊಳ್ಳುತ್ತೇವೆ. ಅದರಲ್ಲೂ ಗೆಳತಿಯ ಗಂಡನೇ ಫ್ಲರ್ಟ್ ಮಾಡುವಾಗ ಅದನ್ನು ಆಕೆಯ ಬಳಿ ಹೇಳಿದರೆ ಆಕೆ ನಂಬುವಳೇ? ಅಥವಾ ಹೇಳಿ ಸಂಬಂಧ ಹಾಳು ಮಾಡಿಕೊಳ್ಳಬಹುದೇ? ಎಂಬ ಗೊಂದಲ ಕಾಡುತ್ತದೆ.
ಇಲ್ಲಿ ಸಂಬಂಧ ಹಾಳು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾವುದೇ ವಿಚಾರವೂ ಮನಸ್ಸಿಗೆ ಇಷ್ಟವಾಗದೇ ಇದ್ದಾಗ ಅದನ್ನು ಸಹಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಗೆಳತಿಯ ಸ್ನೇಹ ನಿಜವೇ ಆಗಿದ್ದರೆ ಆಕೆ ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಹಾಗಿದ್ದರೂ ಆಕೆಯ ಮನ ನೋಯಿಸುವ ಉದ್ದೇಶ ನಿಮಗಿಲ್ಲದೇ ಹೋದರೆ ನೇರವಾಗಿ ಆಕೆಯ ಗಂಡನ ಬಳಿಯೇ ಈ ವಿಚಾರವನ್ನು ಹೇಳಿ ಕಟ್ಟುನಿಟ್ಟಾಗಿರುವಂತೆ ಸೂಚಿಸಬಹುದು.