Select Your Language

Notifications

webdunia
webdunia
webdunia
webdunia

ಈ ಹಣ್ಣನ್ನು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

ಈ ಹಣ್ಣನ್ನು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ
ಬೆಂಗಳೂರು , ಭಾನುವಾರ, 3 ಅಕ್ಟೋಬರ್ 2021 (07:38 IST)
Weight Loss Tips : ಅಂಜೂರದಲ್ಲಿರುವ ಪೋಷಕಾಂಶಗಳು ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ಬಲಪಡಿಸುವಲ್ಲಿ ಸುಧಾರಿಸುತ್ತದೆ.
Photo Courtesy: Google

ಅಂಜೀರ್ ಅಥವಾ ಅಂಜೂರ ಹಣ್ಣುಗಳು ಆರೋಗ್ಯಕರ ಪೋಷಕಾಂಶಗಳಿಂದ ತುಂಬಿರುತ್ತವೆ. ಅಂಜೂರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಿಬ್ಬೊಟ್ಟೆಯ ಪ್ರದೇಶದಲ್ಲಿನ ಬೊಜ್ಜನ್ನು ಕಡಿಮೆ ಮಾಡುತ್ತದೆ. ನೀವು ಇದನ್ನು ಕ್ಯಾಲೋರಿ ನಿಯಂತ್ರಿತ ಸಮತೋಲಿತ ಆಹಾರದಲ್ಲಿ ಕೂಡ ಸೇರಿಸಬಹುದು. ಅಂಜೂರ ಹಣ್ಣನ್ನು ಹಸಿಯಾಗಿಸಿ ಸೇವಿಸಬಹುದು ಅಥವಾ ಒಣಗಿಸಿ ಕೂಡ ಸೇವಿಸಬಹುದು.
ಅಂಜೂರದಲ್ಲಿರುವ ಪೋಷಕಾಂಶಗಳು ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ಬಲಪಡಿಸುವಲ್ಲಿ ಸುಧಾರಿಸುತ್ತದೆ. ಇದರಲ್ಲಿರುವ ಅಧಿಕ ಪೊಟ್ಯಾಸಿಯಮ್ ಮಟ್ಟದ ಸಹಾಯದಿಂದ ರಕ್ತದೊತ್ತಡದವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತೂಕವನ್ನು ಕಳೆದುಕೊಳ್ಳಲು ಅಂಜೂರ ಹಣ್ಣು ಹೇಗೆ ಸಹಾಯ ಮಾಡುತ್ತದೆ?
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಅಂಜೂರದಲ್ಲಿ ಫಿಸಿನ್ ಎಂಬ ಕಿಣ್ವವಿದ್ದು, ಅದು ಜೀರ್ಣಾಂಗ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಫೈಬರ್ನಿಂದ ಸಮೃದ್ಧವಾಗಿದೆ
ಅಂಜೂರದ ಹಣ್ಣುಗಳು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ. ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿದಂತೆ ಮಾಡುತ್ತದೆ. ಅಂಜೂರ ದಿನನಿತ್ಯದ ಕ್ಯಾಲೋರಿ ಸೇವನೆಯ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ. ಫೈಬರ್ ಅಂಶದ ಜತೆಗೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಕರುಳಿನ ಕಾರ್ಯವ್ಯವಸ್ಥೆಗೂ ಸಹಾಯ ಮಾಡುತ್ತದೆ.
ಕ್ಯಾಲೋರಿ ಸುಡುತ್ತದೆ
ವ್ಯಾಯಾಮ ಮಾಡುವಾಗ ಸ್ನಾಯುಗಳಲ್ಲಿನ ಕ್ಯಾಲೊರಿಗಳನ್ನು ಸುಡಲು ಅಂಜೂರ ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಿವೆ. ತೂಕ ಇಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ರಕ್ತನಾಳದ ಕಾಯಿಲೆಗಳಿಂದ ಹೃದಯವನ್ನು ಕಾಪಾಡುತ್ತದೆ.
ಚಯಾಪಚಯವನ್ನು ಹೆಚ್ಚಿಸುತ್ತದೆ
ಅಂಜೂರದಲ್ಲಿರುವ ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಶಿಯಂ, ರಂಜಕ, ಕಬ್ಬಿಣ ಮತ್ತು ಮೆಗ್ನೀಸಿಯಮ್ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಖನಿಜಗಳು ಮಾತ್ರವಲ್ಲ, ವಿಟಮಿನ್ ಎ ಮತ್ತು ಬಿ ಇದರಲ್ಲಿದೆ . ಈ ಅಂಶಗಳು ಚಯಾಪಚಯ ದರವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಕಡಿಮೆ ಕ್ಯಾಲೋರಿ ಹೊಂದಿದೆ
ಅಂಜೂರದ ಹಣ್ಣುಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಆದ್ದರಿಂದ, ನೀವು ಅದನ್ನು ತಿಂಡಿಯೊಂದಿಗೆ ಸೇರಿಸಿಕೊಳ್ಳಬಹುದು. ಅದಾಗ್ಯೂ, ಅಂಜೂರದ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಏಕೆಂದರೆ ಅದು ಸಿಹಿಯಾಗಿರುತ್ತದೆ ಮತ್ತು ಕೆಲವರಿಗೆ ಅಲರ್ಜಿಯಾಗುವ ಸಾಧ್ಯತೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ