Select Your Language

Notifications

webdunia
webdunia
webdunia
webdunia

ಉತ್ತಮವಾದ ಆರೋಗ್ಯಕಾರಿ ಅಡುಗೆ ಎಣ್ಣೆ ಯಾವುವು..? ಯಾಕೆ ಆಯ್ಕೆ ಮಾಡಬೇಕು?

ಉತ್ತಮವಾದ ಆರೋಗ್ಯಕಾರಿ ಅಡುಗೆ ಎಣ್ಣೆ ಯಾವುವು..? ಯಾಕೆ ಆಯ್ಕೆ ಮಾಡಬೇಕು?
ಬೆಂಗಳೂರು , ಶುಕ್ರವಾರ, 1 ಅಕ್ಟೋಬರ್ 2021 (07:40 IST)
ಕೊರೋನಾದಿಂದ ಬಳಲಿ ಬೆಂಡಾದ ಜನರು ಇದೀಗ ಆರೋಗ್ಯದತ್ತ ವಿಶೇಷವಾಗಿ ಕಾಳಜಿ ವಹಿಸುತ್ತಿದ್ದಾರೆ. ಆಹಾರ ಪದ್ಧತಿ ಜೀವನಶೈಲಿಯ ಒಂದು ಭಾಗವಾಗಿರುವುದರಿಂದ ಸುರಕ್ಷತೆ, ಪೌಷ್ಟಿಕಾಂಶದಿಂದ ಕೂಡಿರುವಂತೆ ನೋಡಿ ಕೊಳ್ಳಬೇಕಾಗುತ್ತದೆ.
Photo Courtesy: Google

ಹಾಗಾಗಿಯೇ ತಜ್ಞರು ಅನಾರೋಗ್ಯದಿಂದ ದೂರವಿರಬೇ ಕಾದರೆ ಪೌಷ್ಟಿಕ ಆಹಾರಗಳು ನಿಮ್ಮ ಆದ್ಯತೆಯಾಗಿರಲಿ ಎಂದು ಸಲಹೆ ನೀಡುತ್ತಾರೆ. ಆಧುನಿಕ ಬದುಕಿಗೆ ಒಗ್ಗಿಕೊಂಡು ಬದುಕುತ್ತಿರುವ ನಮ್ಮನ್ನು ಒತ್ತಡ ಎಂಬುದು ಬಾಧಿಸುತ್ತಿದೆ. ಇದನ್ನು ವಿಶ್ರಾಂತಿ, ದೈಹಿಕ ಸಾಮರ್ಥ್ಯಗಳ ನ್ನೊಳಗೊಂಡಂತೆ ಜೀವನಶೈಲಿಯ ಬದಲಾವಣೆಗಳಿಂದ ಮಾತ್ರ ಒತ್ತಡದ ಜೀವನವನ್ನು ಎದುರಿಸಬಹುದು.
ಮೋದಿ ನ್ಯಾಚುರಲ್ಸ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಮೋದಿ ಹೇಳುವಂತೆ, ನೀವು ಸೇವಿಸುವ ಮತ್ತು ಅಡುಗೆ ಮಾಡುವ ಆಹಾರದ ಬಗ್ಗೆ ಜಾಗೃತರಾಗಿರುವುದು ಅತ್ಯಂತ ಮುಖ್ಯವಾಗಿದೆ. ಹಾಗಾಗಿ ಉತ್ತಮವಾದ ಎಣ್ಣೆ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯ. "ಇದು ಫ್ರೈ ಮಾಡುವುದು, ಕರಿಯುವುದು (ಬೋಂಡ, ಹಪ್ಪಳ) ಅಥವಾ ಗ್ರಿಲ್ಲಿಂಗ್ ಆಗಿರಲಿ, ಹೀಗೆ ಏನೇ ಮಾಡಲಿ ಎಣ್ಣೆಯು ಅಡುಗೆಯಲ್ಲಿ ಬಳಸುವ ಸಾಮಾನ್ಯ ಮತ್ತು ಅಗತ್ಯವಾದ ಪದಾರ್ಥಗಳಲ್ಲಿ ಒಂದಾಗಿದೆ" ಎಂದು ಹೇಳುತ್ತಾರೆ.
ಉತ್ತಮವಾದ ಎಣ್ಣೆಯನ್ನು ಏಕೆ ಆಯ್ಕೆ ಮಾಡಬೇಕು..?
ಮೋದಿಯವರ ಪ್ರಕಾರ, ಖಾದ್ಯ ತೈಲಗಳು ಕೊಬ್ಬಿನ ಮೂಲವಾಗಿದೆ, ಆದರೆ ಅತಿಯಾದ ಬಳಕೆ ಹೃದ್ರೋಗದ ಅಪಾಯಕ್ಕೆ ಕಾರಣವಾಗಬಹುದು. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತೈಲಗಳು ಲಭ್ಯವಿವೆ, ಆದರೆ ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕವಾಗಿವೆ ಎಂದು ಹೇಳಲು ಬರುವುದಿಲ್ಲ.
ಆಲಿವ್ ಎಣ್ಣೆ
webdunia
Photo Courtesy: Google

ಆಲಿವ್ ಎಣ್ಣೆಯನ್ನು ಆಲಿವ್ ಹಣ್ಣಿನಿಂದ ತೆಗೆಯಲಾಗಿದೆ ಮತ್ತು ಆರೋಗ್ಯಕರ ಮೋನೋ ಸಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದೆ ಎಂದು ಅವರು ಹೇಳುತ್ತಾರೆ. ಇದು ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಲಿವ್ ಎಣ್ಣೆಯಲ್ಲಿ ಉರಿಯೂತ ನಿಯಂತ್ರಿಸುವ ಗುಣಲಕ್ಷಣ ಇರುವುದರಿಂದ ರಕ್ತದೊತ್ತಡ ಕಡಿಮೆ ಮಾಡುತ್ತದೆ. 'ಕೆಟ್ಟ' ಎಲ್ಡಿಎಲ್ ಕೊಲೆಸ್ಟ್ರಾಲ್ ಕಣಗಳನ್ನು ಆಕ್ಸಿಡೀಕರಣದಿಂದ ರಕ್ಷಿಸುತ್ತದೆ ಮತ್ತು ರಕ್ತನಾಳಗಳ ಕಾರ್ಯ ಸುಧಾರಿಸುತ್ತದೆ.
ರೈಸ್ ಬ್ರ್ಯಾನ್ ಎಣ್ಣೆ
webdunia

ಇದನ್ನು ಅಕ್ಕಿಯ ಹೊಟ್ಟುಗಳಿಂದ ಹೊರತೆಗೆಯಲಾಗುತ್ತದೆ. ಈ ಎಣ್ಣೆಯು ವಿಟಮಿನ್ ಇ, ಕೆ ಮತ್ತು ಪಾಲಿಅನ್ಸಾಚುರೇಟೆಡ್ ಮತ್ತು ಮೋನೋ ಸಾಚುರೇಟೆಡ್ ಕೊಬ್ಬುಗಳ ಉತ್ತಮ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ರಕ್ತದ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಬಹುದು, ಇದು ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ.
ವಿವಿಧ ಪ್ರಯೋಜನಗಳ ಕಾರಣದಿಂದಾಗಿ, ಆಲಿವ್ ಎಣ್ಣೆ ಮತ್ತು ರೈಸ್ ಬ್ರ್ಯಾನ್ ಎಣ್ಣೆಯ ಮಿಶ್ರಣವು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಜನರಿಗೆ ದೈನಂದಿನ ಅಡುಗೆಗೆ ಸೂಕ್ತವಾಗಿದೆ" ಎಂದು ಅಕ್ಷಯ್ ಮೋದಿ ಹೇಳುತ್ತಾರೆ.
ಲಾಭಗಳು
1. ಇದು ಇತರ ಎಣ್ಣೆಗಳಿಗೆ ಹೋಲಿಸಿದರೆ ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಲಿನೋಲಿಕ್ ಆಮ್ಲದೊಂದಿಗೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ವೈಜ್ಞಾನಿಕವಾಗಿ ಹೃದಯ ಮತ್ತು ರಕ್ತನಾಳಗಳ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
2. ಇದು ಅಧಿಕ ಶಾಖ ಉತ್ಪಾದಿಸಲಿದ್ದು, ಅದು ಹುರಿಯಲು ಮತ್ತು ಡೀಪ್ ಫ್ರೈಗೆ ಅತ್ಯುತ್ತಮವಾಗಿದೆ. ಇದು ಅಧಿಕ ಉಷ್ಣಾಂಶದಲ್ಲಿ ಕೊಬ್ಬಿನ ಆಮ್ಲದ ವಿಭಜನೆ ತಡೆಯುತ್ತದೆ, ಹೀಗಾಗಿ ಆಹಾರವನ್ನು ಆರೋಗ್ಯಕರವಾಗಿಸುತ್ತದೆ.
3. ಇದು ಒರಿಜನಾಲ್ ಅನ್ನು ಹೊಂದಿದೆ, ಇದು ಪ್ರಬಲವಾದ ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು, ಅತ್ಯುತ್ತಮ ಕೊಲೆಸ್ಟ್ರಾಲ್ ಮಟ್ಟ ನಿರ್ವಹಿಸುವ ಮೂಲಕ ಹೃದಯದ ಕಾಯಿಲೆಯಿಂದ ರಕ್ಷಿಸುತ್ತದೆ (LDL ಅನ್ನು ಕಡಿಮೆ ಮಾಡುತ್ತದೆ ಮತ್ತು HDL ಅನ್ನು ಹೆಚ್ಚಿಸುತ್ತದೆ).
4. ರೈಸ್ ಬ್ರ್ಯಾನ್ ಎಣ್ಣೆಯು ಪೌಷ್ಠಿಕಾಂಶಗಳನ್ನೊಳಗೊಂಡಿರುವ ಅತ್ತುತ್ತಮ ಎಣ್ಣೆ ಎಂದು ಸಾಬೀತಾಗಿದೆ ಮತ್ತು ಆಲಿವ್ ಎಣ್ಣೆಯು ಹೃದಯರಕ್ತನಾಳದ ಕಾಯಿಲೆಗಳನ್ನು ಹೆಚ್ಚಿಸುವುದನ್ನು ತಡೆಯುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
5. ಮಧುಮೇಹ, ಸ್ಥೂಲಕಾಯ ತಪ್ಪಿಸುವಲ್ಲಿ ಈ ಎರಡು ಎಣ್ಣೆಗಳು ಪ್ರಮುಖವಾಗಿದೆ.
"ಪೌಷ್ಟಿಕತಜ್ಞರು ಮತ್ತು ಅಡುಗೆ ತಜ್ಞರ ಪ್ರಕಾರ, ಆರೋಗ್ಯಕರ ಮಲ್ಟಿಸೋರ್ಸ್ ಅಡುಗೆ ಎಣ್ಣೆಯು ಸಂಯೋಜಿತ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಅದು ನಿಮ್ಮನ್ನು ದಿನವಿಡೀ ಸಕ್ರಿಯವಾಗಿರಿಸುತ್ತದೆ" ಎಂದು ಹೇಳುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಂಬೆ ನೀರಿನ ಅನಾನುಕೂಲತೆಗಳ ಬಗ್ಗೆ ತಿಳಿದಿದೆಯೇ?