Select Your Language

Notifications

webdunia
webdunia
webdunia
webdunia

ಆಯುಷ್ಯ ವೃದ್ಧಿಸಲು ವಾಲ್ನಟ್ ಹೇಗೆ ಸಹಕಾರಿಯಾಗಿದೆ ಗೊತ್ತೇ? ಇಲ್ಲಿದೆ ವಿವರ..

ಆಯುಷ್ಯ ವೃದ್ಧಿಸಲು ವಾಲ್ನಟ್ ಹೇಗೆ ಸಹಕಾರಿಯಾಗಿದೆ ಗೊತ್ತೇ? ಇಲ್ಲಿದೆ ವಿವರ..
ಬೆಂಗಳೂರು , ಭಾನುವಾರ, 19 ಸೆಪ್ಟಂಬರ್ 2021 (07:02 IST)
Health Benefits of Walnut: ಅಧ್ಯಯನದಲ್ಲಿ ತಿಳಿದು ಬಂದ ಅಂಶವೇನೆಂದರೆ ಪ್ರತೀ ವಾರ ಅರ್ಧ ಮುಷ್ಟಿಯಷ್ಟು ವಾಲ್ನಟ್ಗಳನ್ನು ಸೇವಿಸುವುದು ಅನೇಕ ಕಾಯಿಲೆಗಳಿಂದ ಬಳಲುವವರ ಆಯುಷ್ಯವನ್ನು ಹೆಚ್ಚಿಸಲಿದೆ.

Walnutಗಳನ್ನು ನಿತ್ಯವೂ ಸೇವಿಸುವುದರಿಂದ ಮರಣದ ಅಪಾಯ ಕಡಿಮೆಯಾಗಲಿದ್ದು ಜೀವಿತಾವಧಿ ಹೆಚ್ಚುತ್ತದೆ ಎಂಬುದಾಗಿ Harvard ಅಧ್ಯಯನವೊಂದು ತಿಳಿಸಿದೆ. ನ್ಯೂಟ್ರಿಯಂಟ್ಸ್ ಹೆಸರಿನ ಪತ್ರಿಕೆಯಲ್ಲಿ ಅಧ್ಯಯನವು ವಿವರಗಳನ್ನು ಪ್ರಕಟಿಸಿದ್ದು ಒಣಹಣ್ಣುಗಳನ್ನು ಸೇವಿಸದೇ ಇರುವವರು ಹಾಗೂ ಸೇವಿಸುವವರ ನಡುವಿನ ಅಂಕಿಅಂಶಗಳನ್ನು ವಿಶ್ಲೇಷಿಸಿ ಅಧ್ಯಯನವು ಮಹತ್ವದ ಬೆಳವಣಿಗೆಯನ್ನು ಕಂಡುಕೊಂಡಿದೆ.
ಪ್ರತೀ ವಾರ ಐದು ಅಥವಾ ಆರು ಬಾರಿ ವಾಲ್ನಟ್ಗಳನ್ನು ಸೇವಿಸುವುದು ಮರಣ ಪ್ರಮಾಣವನ್ನು ತಗ್ಗಿಸಿ ಜೀವಿತಾವಧಿಯಲ್ಲಿ ದೀರ್ಘತೆಯನ್ನು ನೀಡಲಿದೆ ಎಂಬುದು ಅಧ್ಯಯನಯದಿಂದ ತಿಳಿದುಬಂದಿದೆ. ಈ ಅಧ್ಯಯನದಲ್ಲಿ ತಿಳಿದು ಬಂದ ಅಂಶವೇನೆಂದರೆ ಪ್ರತೀ ವಾರ ಅರ್ಧ ಮುಷ್ಟಿಯಷ್ಟು ವಾಲ್ನಟ್ಗಳನ್ನು ಸೇವಿಸುವುದು ಅನೇಕ ಕಾಯಿಲೆಗಳಿಂದ ಬಳಲುವವರ ಆಯುಷ್ಯವನ್ನು ಹೆಚ್ಚಿಸಲಿದೆ ಎಂಬುದಾಗಿ ಅಧ್ಯಯನ ನಡೆಸಿದ ಹಿರಿಯ ಸಂಶೋಧಕ ಯಾನ್ಪಿಂಗ್ ಲಿ ತಿಳಿಸಿದ್ದಾರೆ. ಇಂದಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯವಾಗಿರುವುದರಿಂದ ಆರೋಗ್ಯ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವವರೂ ಕೂಡ ನಿತ್ಯದ ಆಹಾರದಲ್ಲಿ ವಾಲ್ನಟ್ಗಳನ್ನು ಬಳಸಬಹುದೆಂದು ಯಾನ್ಪಿಂಗ್ ಸಲಹೆ ನೀಡಿದ್ದಾರೆ.
ಮರಣ ಪ್ರಮಾಣ ಕಡಿಮೆ
webdunia

ಪ್ರತೀ ವಾರ ಐದು ಅಥವಾ ಆರು ಬಾರಿ ವಾಲ್ನಟ್ಗಳನ್ನು ಸೇವಿಸುವುದು ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಮರಣ ಪ್ರಮಾಣವನ್ನು ಕಡಿಮೆಗೊಳಿಸಲಿದೆ ಎಂಬುದು ತಿಳಿದುಬಂದಿದೆ. ಇನ್ನು ವಾಲ್ನಟ್ಗಳನ್ನು ಸೇವಿಸದೇ ಇರುವವರಿಗಿಂತ ಸೇವಿಸುವವರಲ್ಲಿ 1.3 ವರ್ಷಗಳ ದೀರ್ಘಯುಷ್ಯ ಕಂಡುಬಂದಿದೆ. ಪ್ರತೀ ವಾರ ಎರಡು ಅಥವಾ ನಾಲ್ಕು ಬಾರಿ ವಾಲ್ನಟ್ಗಳ ಸೇವನೆಯಿಂದ ಕೂಡ ಆರೋಗ್ಯ ಪ್ರಯೋಜನಗಳಿದ್ದು ಮರಣ ಪ್ರಮಾಣದಲ್ಲಿ 13% ಇಳಿಕೆಯಾಗಿರುವುದನ್ನು ಅಧ್ಯಯನ ದಾಖಲಿಸಿದೆ. ಇನ್ನು ಹೃದಯ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಮರಣ ಪ್ರಮಾಣದಲ್ಲಿ 14% ಇಳಿಕೆಯಾಗಿದೆ ಎಂಬುದಾಗಿ ಅಧ್ಯಯನ ಪ್ರಮಾಣೀಕರಿಸಿದೆ.
ಅದೇ ರೀತಿ ಪ್ರತೀನಿತ್ಯ ಅರ್ಧದಷ್ಟು ಪ್ರಮಾಣದಲ್ಲಿ ವಾಲ್ನಟ್ ಸೇವಿಸುವವರಲ್ಲಿ ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳು ಅಭಿವೃದ್ಧಿಯಾಗಲಿದ್ದು ಮರಣ ಪ್ರಮಾಣ 12% ಕಡಿಮೆಯಾಗಿದ್ದು ಹೃದಯಾಘಾತದಿಂದ ಸಂಭವಿಸುವ ಮರಣದಲ್ಲಿ 26% ತಗ್ಗಿದೆ. ಈ ಅಧ್ಯಯನಕ್ಕಾಗಿ ಸಂಶೋಧಕರು 63.6 ವರ್ಷಗಳ 67,014 ಮಹಿಳೆಯರು ಹಾಗೂ 63.6 ವಯಸ್ಸಿನ 26,326 ಪುರುಷರ ಮೇಲೆ ಅಧ್ಯಯನ ನಡೆಸಲಾಯಿತು.
ಅಧ್ಯಯನದಿಂದ ತಿಳಿದು ಬಂದ ಮಾಹಿತಿ ಏನು?
ಭಾಗವಹಿಸುವವರು ಅಧ್ಯಯನಕ್ಕೆ ಸೇರಿದಾಗ ತುಲನಾತ್ಮಕವಾಗಿ ಆರೋಗ್ಯವಾಗಿದ್ದರು ಮತ್ತು ಅವರ ಮೇಲೆ ಸುಮಾರು 20 ವರ್ಷಗಳ ಕಾಲ (1998-2018) ನಿಗಾ ಇರಿಸಲಾಯಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಹಾರ ಸೇವನೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ, ಈ ಸಮಯದಲ್ಲಿ ಭಾಗವಹಿಸುವವರು ತಮ್ಮ ಒಟ್ಟಾರೆ ಆಹಾರ ಸೇವನೆಯ ಬಗ್ಗೆ ವರದಿ ಮಾಡುತ್ತಾರೆ, ಅಂದರೆ ಕಡಲೆಕಾಯಿ ವಾಲ್ನಟ್ಸ್, ಹಾಗೂ ಇತರ ಒಣ ಹಣ್ಣುಗಳನ್ನು ಬೀಜಗಳನ್ನು ಎಷ್ಟು ಬಾರಿ ಸೇವಿಸುತ್ತಾರೆ, ಜೊತೆಗೆ ಜೀವನಶೈಲಿ ಅಂಶಗಳು ಅಂದರೆ ವ್ಯಾಯಾಮ ಮತ್ತು ಧೂಮಪಾನದ ಸ್ಥಿತಿಯನ್ನೂ ವರದಿ ಮಾಡುತ್ತಿದ್ದರು.
ಈ ಡೇಟಾವನ್ನು ಆಧರಿಸಿ ಸಂಶೋಧಕರಿಗೆ ವಾಲ್ನಟ್ಗಳಿಂದ ಆಯುಷ್ಯ ವರ್ಧಿಸಬಹುದು ಎಂಬ ಅಂಶ ಮನವರಿಕೆಯಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಬೇರೆ ಬೇರೆ ಅಂಶಗಳನ್ನು ಈ ಸಮಯದಲ್ಲಿ ಅಧ್ಯಯನಕಾರರು ಗುರುತಿಸಿದರು. ವಾಲ್ನಟ್ಗಳನ್ನು ಸೇವಿಸುವವರು ಸೇವಿಸದೇ ಇರುವವರಿಗಿಂತ ಮರಣ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯನ್ನು ಕಂಡುಕೊಂಡಿದ್ದು ಹೃದಯ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಮರಣ ಪ್ರಮಾಣದಲ್ಲೂ ಇಳಿಕೆಯನ್ನು ಕಂಡುಕೊಂಡಿದ್ದಾರೆ ಎಂಬ ಅಂಶ ಮನದಟ್ಟಾಗಿದೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೀವಿಯಾ ವಿಶೇಷತೆ ಏನು? ಈ ಎಲೆಗಳ ಆರೋಗ್ಯಯುತ ಪ್ರಯೋಜನಗಳು ಯಾವುವು?