Select Your Language

Notifications

webdunia
webdunia
webdunia
webdunia

ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ

ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ
ಬೆಂಗಳೂರು , ಶನಿವಾರ, 18 ಸೆಪ್ಟಂಬರ್ 2021 (14:53 IST)
ಬಿರುಕು ಬಿಟ್ಟ ಪಾದಗಳ ಹಿಮ್ಮಡಿಯಲ್ಲಿ ಮಣ್ಣಿನ ಕಣಗಳು ಸೇರಿಕೊಳ್ಳುವುದರಿಂದ ನೋವಿನ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಪಾದಗಳ ಆರೈಕೆಗಾಗಿಯೇ ಕೆಲವೊಂದಿಷ್ಟು ಸಲಹೆಗಳು ನಿಮಗಾಗಿ.

ಸಾಮಾನ್ಯವಾಗಿ ಪಾದಗಳು ಸುಂದರವಾಗಿ ಕಾಣಿಸಬೇಕು ಎಂಬುದು ಎಲ್ಲರ ಆಸೆ. ಹಾಗಾಗಿಯೇ ಹೆಚ್ಚು ಆರೈಕೆ ಮಾಡಿ, ಪಾದಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ. ಚರ್ಮದ ಒಡೆತದಿಂದ ನೋವು ಕಾಣಿಸಿಕೊಳ್ಳುತ್ತಿರಬಹುದು. ಇಲ್ಲವೇ ಕಾಲು ಒಡೆತದಿಂದ ಪಾದಗಳು ಹೆಚ್ಚು ಹಾನಿಗೊಳಗಾಗಿರಬಹುದು. ಇದರಿಂದ ನೋಡಲು ಅಷ್ಟು ಸುಂದರವಾಗಿ ಕಾಣಿಸುವುದಿಲ್ಲ. ಜತೆಗೆ ಬಿರುಕು ಬಿಟ್ಟ ಪಾದಗಳ ಹಿಮ್ಮಡಿಯಲ್ಲಿ ಮಣ್ಣಿನ ಕಣಗಳು ಸೇರಿಕೊಳ್ಳುವುದರಿಂದ ನೋವಿನ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಪಾದಗಳ ಆರೈಕೆಗಾಗಿಯೇ ಕೆಲವೊಂದಿಷ್ಟು ಸಲಹೆಗಳು ನಿಮಗಾಗಿ.
ಸುಂದರ ಪಾದಗಳನ್ನು ಹೊಂದಲು ಕೆಲವು ಸಲಹೆಗಳು
ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಕಾಲನ್ನು ಒಣಗಿಸಿಟ್ಟುಕೊಳ್ಳಿ
webdunia

ನೀವು ಹೊರಗಡೆ ಓಡಾಡಿದಂತೆಯೇ ಪಾದಗಳು ಧೂಳು, ಮಣ್ಣಿನ ಕಣಗಳು, ಕೊಳಕಿನಿಂದ ಹಾನಿಗೊಳಗಾಗುತ್ತವೆ. ಜತೆಗೆ ಅತಿಯಾಗಿ ಓಡಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ನಂಜಿನ ಶರೀರದವರಿಗೆ ಕಾಲುಗಳ ಬೆರಳುಗಳ ಸಂದಿಯಲ್ಲಿ ಗಾಯವಾಗಬಹುದು. ಹಾಗಾಗಿ ಎಂದೂ ಒದ್ದೆಯಾದ ಕಾಲನ್ನು ಹೊಂದಬೇಡಿ. ನೀರಿನಲ್ಲಿ ತೊಳೆದ ತಕ್ಷಣ ಒಣ ವಸ್ತ್ರದಲ್ಲಿ ಕಾಲನ್ನು ಒರೆಸಿಕೊಳ್ಳಿ.
ಶೂಗಳು ಮತ್ತು ಸಾಕ್ಸ್ಗಳ ಬಳಕೆ
webdunia

ಧೂಳು, ಮಣ್ಣು ಮತ್ತು ವಾತಾವರಣದ ಏರು ಪೇರಿನಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಶೂ ಧರಿಸುವುದರ ಜತೆಗೆ ಸಾಕ್ಸ್ಗಳನ್ನು ಹಾಕಿಕೊಳ್ಳಿ. ಆಗ ನಿಮ್ಮ ಪಾದಗಳು ಕೆಸರು ಹಾಗೂ ಹಾನಿಕಾರಕ ವಸ್ತುಗಳು ತಗುಲಿ ಹಾನಿಗೊಳಗಾಗುವುದನ್ನು ತಡೆಯಬಹುದು.
ಪಾದಗಳ ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಿ
webdunia

ಶುಚಿತ್ವ ಮತ್ತು ನೈರ್ಮಲ್ಯದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮಲಗುವಾಗ ಕಾಲಿನ ಪಾದಗಳನ್ನು ಸ್ವಚ್ಛವಾಗಿ ತೊಳೆದು ಒಣ ವಸ್ತ್ರದಲ್ಲಿ ಒರೆಸಿ. ಬಳಿಕ ಶುದ್ಧವಾದ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನಿಮ್ಮ ಪಾದದ ಚರ್ಮ ಹೊಳಪು ಪಡೆಯುತ್ತದೆ ಮತ್ತು ಚರ್ಮ ಹೆಚ್ಚು ಮೃದುವಾಗಿ ಸುಂದರವಾಗಿ ಕಾಣಿಸುತ್ತದೆ.
ಬೇರೆಯವರ ಶೂಗಳನ್ನು ಎಂದಿಗೂ ಧರಿಸಬೇಡಿ
ಚರ್ಮದ ಖಾಯಿಲೆಗಳು ಬಹುಬೇಗ ಹರಡುತ್ತವೆ. ಹಾಗಾಗಿ ಇನ್ನೊಬ್ಬರ ಶೂಗಳನ್ನು ಅಥವಾ ಸಾಕ್ಸ್ಗಳನ್ನು ಧರಿಸುವುದು ಒಳ್ಳೆಯದಲ್ಲ. ಜತೆಗೆ ಅವರ ಬೆವರು, ಧೂಳು ನಿಮ್ಮ ಕಾಲಿಗೆ ಅಂಟಿಕೊಳ್ಳುವುದರಿಂದ ಅಲರ್ಜಿಯಂತಹ ಸಮಸ್ಯೆಗಳನ್ನು ಎದುರಿಸಬಹುದಾದ ಪರಿಸ್ಥಿತಿ ಬರಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ನಿಯಮಿತವಾಗಿ ಈ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ