Select Your Language

Notifications

webdunia
webdunia
webdunia
webdunia

ಕಣ್ಣಿನ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಐದು ವಸ್ತುಗಳು

ಕಣ್ಣಿನ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಐದು ವಸ್ತುಗಳು
ಬೆಂಗಳೂರು , ಶುಕ್ರವಾರ, 17 ಸೆಪ್ಟಂಬರ್ 2021 (15:05 IST)
ನವದೆಹಲಿ : ಕಣ್ಣುಗಳು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದೆ. ನಮ್ಮ ಕಣ್ಣುಗಳ ಮೂಲಕ ನಾವು ಜಗತ್ತಿನ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ನೋಡಬಹುದು. ದೇಹದ ಉಳಿದ ಭಾಗವನ್ನು ಆರೋಗ್ಯಕರವಾಗಿಡಲು, ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರದ ಅಗತ್ಯವಿದೆ. ಅದೇ ರೀತಿ, ಕಣ್ಣುಗಳನ್ನು ಆರೋಗ್ಯವಾಗಿಡಲು ಕೂಡಾ ಆರೋಗ್ಯಕರ ಆಹಾರದ ಅಗತ್ಯವಿದೆ.

ಇಂದಿನ ಬದಲಾಗುತ್ತಿರುವ ಜೀವನಶೈಲಿ, ತಿನ್ನುವುದು ಮತ್ತು ಗಂಟೆಗಟ್ಟಲೆ ಕಂಪ್ಯೂಟರ್ನಲ್ಲಿ ಕಚೇರಿ ಕೆಲಸ ಮಾಡುವುದು ಅಥವಾ ಮೊಬೈಲ್ನಲ್ಲಿ ಆಟವಾಡುವುದ ಇಂಥಹ ಹವ್ಯಾಸಗಳು ಕಣ್ಣುಗಳನ್ನು ದುರ್ಬಲಗೊಳಿಸುತ್ತದೆ. ಕಣ್ಣುಗಳಿಗೆ ಹಾನಿಯಾಗುವುದನ್ನು ತಡೆಯಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು, ನಿಮ್ಮ ಆಹಾರದಲ್ಲಿ ವಿಟಮಿನ್, ಖನಿಜಾಂಶಗಳು ಮತ್ತು ಪೌಷ್ಟಿಕಾಂಶವಿರುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು  ಸಹಾಯ ಮಾಡುವ ಆಹಾರಗಳು ಯಾವುವುದ ನೊಡೋಣ.
ಕಣ್ಣುಗಳನ್ನು ಆರೋಗ್ಯವಾಗಿಡಲು, ಆಹಾರದಲ್ಲಿ ಅಂಶಗಳನ್ನು ಸೇರಿಸಿ
1. ಬೀಜಗಳು
webdunia
webdunia

ಡ್ರೈ ಫ್ರುಟ್ಸ್  ಮತ್ತು ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್-ಇ ಅವುಗಳಲ್ಲಿ ಹೇರಳವಾಗಿ ಕಂಡುಬರುತ್ತದೆ, ಇದು ದೃಷ್ಟಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
2. ಮೊಟ್ಟೆಗಳು
webdunia

ಮೊಟ್ಟೆಗಳನ್ನು ಪ್ರೋಟೀನ್ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ಮಾತ್ರವಲ್ಲ, ಇದರಲ್ಲಿ ಅಮೈನೋ ಆಮ್ಲಗಳು, ಸಲ್ಫರ್, ಲೆಕ್ಟಿನ್, ಲುಟೀನ್, ಸಿಸ್ಟೀನ್ ಮತ್ತು ವಿಟಮಿನ್ ಬಿ 2 ಇದೆ. ಜೀವಕೋಶದ ಕಾರ್ಯಕ್ಕೆ ವಿಟಮಿನ್ ಬಿ ಮುಖ್ಯವಾಗಿದೆ. ಮೊಟ್ಟೆಗಳ ಸೇವನೆಯು ಕಣ್ಣಿನ ಆರೋಗ್ಯಕ್ಕೆ  ಪ್ರಯೋಜನಕಾರಿ.
3. ಎಲೆ ತರಕಾರಿಗಳು
webdunia

ಹಸಿರು ಎಲೆಗಳ ತರಕಾರಿಗಳ ಸೇವನೆ ಕೂಡಾ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಕಬ್ಬಿಣ ಮತ್ತು ಜೀವಸತ್ವಗಳು ಹಸಿರು ಎಲೆಗಳ ತರಕಾರಿಗಳಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದು ದೃಷ್ಟಿ ಸುಧಾರಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
4. ಬೀನ್ಸ್
ಬೀನ್ಸ್ ನಲ್ಲಿ ಬಯೋಫ್ಲವೊನೈಡ್ಸ್ ಮತ್ತು ಜಿಂಕ್ ಸಮೃದ್ಧವಾಗಿದೆ. ಇದು ಕಣ್ಣಿನ ರೆಟಿನಾವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬೀನ್ಸ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ದೃಷ್ಟಿ ಹೆಚ್ಚಾಗುತ್ತದೆ.
5. ಸಿಟ್ರಸ್ ಹಣ್ಣುಗಳು
webdunia

ನಿಮ್ಮ ಆಹಾರದಲ್ಲಿ ಕಿತ್ತಳೆ, ದ್ರಾಕ್ಷಿ, ನಿಂಬೆಹಣ್ಣು ಮತ್ತು ಬೆರಿಹಣ್ಣುಗಳಂತಹ ಹಣ್ಣುಗಳನ್ನು ನೀವು ಸೇರಿಸಿದರೆ, ಕೇವಲ ಕಣ್ಣುಗಳನ್ನು ಮಾತ್ರವಲ್ಲದೆ ಇಡೀ ದೇಹವನ್ನು ಆರೋಗ್ಯವಾಗಿಡಬಹುದು. ವಿಟಮಿನ್ ಸಿ, ವಿಟಮಿನ್ ಇ ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುತ್ತದೆ ಇದು ದೃಷ್ಟಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಹುಳು ಸಮಸ್ಯೆಗೆ ಪಪ್ಪಾಯಿ ಬೀಜ ಮದ್ದು...? ತಜ್ಞರು ಹೇಳೋದೇನು..?