Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಜೇನುತುಪ್ಪ ಸೇವಿಸುವುದು ಉತ್ತಮವೇ?

ಗರ್ಭಿಣಿಯರು ಜೇನುತುಪ್ಪ ಸೇವಿಸುವುದು ಉತ್ತಮವೇ?
ಬೆಂಗಳೂರು , ಸೋಮವಾರ, 5 ನವೆಂಬರ್ 2018 (07:12 IST)
ಬೆಂಗಳೂರು : ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಗರ್ಭಾವಸ್ಥೆಯಲ್ಲಿ ಜೇನು ತುಪ್ಪವನ್ನು ಸೇವಿಸಬಹುದೇ ಎಂಬ ಗೊಂದಲ ಹಲವರಲ್ಲಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.


ಹಲವು ಬಗೆಯ ವಿಟಮಿನ್ಸ್, ಮಿನರಲ್ಸ್, ಆಂಟಿಆಕ್ಸಿಡೆಂಟ್ಸ್, ಅಮೈನೊ ಆಮ್ಲಗಳು ಮತ್ತು ಇತರ ಕಿಣ್ವಗಳಿವೆ. ಜೇನುತುಪ್ಪ ಆಮ್ಲೀಯತೆಯನ್ನು ಹೊಂದಿದ್ದಿ, ಅದು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಅದರೊಂದಿಗೆ, ಜೇನುತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್ಸ್ ಗಳು ರೋಗಗಳನ್ನು ಉಂಟುಮಾಡಬಹುದಾದ ಫ್ರೀ ರಾಡಿಕಲ್ ಗಳನ್ನು  ತೊಡೆದುಹಾಕುತ್ತದೆ. 


ಅದರೊಂದಿಗೆ, ಜೇನುತುಪ್ಪವನ್ನು ಸೇವಿಸುವುದರಿಂದ, ಎಲ್ಲಾ ಬಗೆ ಸೋಂಕುಗಳಿಂದ ಮುಕ್ತಿ ಪಡೆದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ. ಆದರೆ ವೈದ್ಯರ ಸಲಹೆಮೇರೆಗೆ ಸೇವಿಸುವುದು ಉತ್ತಮ. ಹಾಗೇ ಸಾಮಾನ್ಯವಾಗಿ, ಗರ್ಭಿಣಿಯರು ಪ್ರತಿನಿತ್ಯ ೨ರಿಂದ ೫ ಚಮಚ ಜೇನುತುಪ್ಪವನ್ನು ಸೇವಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಗಂಡನಿಗಿಂತ ಈ ವಿಚಾರದಲ್ಲಿ ಸ್ನೇಹಿತರನ್ನೇ ನಂಬುತ್ತಾರೆ!